ಪ್ರೀತಿಯ ಅಣ್ಣನಿಗೆ.....

ನೂರು ಕಾಲ ಬಾಳು ನಗುತಲಿ ನೀನು
ಬಯಸಿ ಬಂದ ಭಾಗ್ಯ ನಿನ್ನದಾಗಲಿ!

ಮತ್ತೆ ಮತ್ತೆ ಬರಲಿ ಈ ದಿನಗಳು
ಸಂತಸದ ಕ್ಷಣಗಳು ನಿನ್ನ ನೆನಪಿನಲ್ಲಿರಲಿ!

ಜನುಮ ದಿನದ ಶುಭಾಶಯ ನಿನಗೀದಿನ
ನಿನ್ನ ಕನಸಿನ ಜೀವನ ನಿನಗಾಗಿ ಕಾಯುತಲಿರಲಿ!

ಪ್ರೀತಿ ತುಂಬಿರುವ ನಿನ್ನ ಹೃದಯದಲಿ
ಮಾತುಗಳು ಜೇನಿನಂತೆ ಮಧುರವಾಗಿರಲಿ!

ತಾಯಿಯ ಆಶಿರ್ವಾದದ ಕಾಣಿಕೆಯೊಂದು ಸಾಕು
ನಿನ್ನ ಬಾಳು ಸದಾ ಬೆಳಗುತಿರಲು!

- ಪ್ರಿಯಾಂಕ

24 Aug 2017, 09:54 am
Download App from Playstore: