ರಾಜಕಾರಣಿ.. ಸರಕಾರಿ ಕೆಲಸ...
ಬೆಪ್ಪುತಕ್ಕಡಿ ಬೆಪ್ಪುತಕ್ಕಡಿ ...
ಏನು ಮಾಡುತಿರುವೆ ಎಂದು ಕೇಳಿತು ಕಪ್ಪು ಕರಡಿ...
ನನಗಿದೆ ದೊಡ್ಡ ಸರಕಾರಿ ಹುದ್ದೆ
ಭ್ರಷ್ಟರ ಮೈಯನ್ನೆಲ ಮಾಡಿಬಿಡುವೆನು ಒದ್ದೆ
ನಾ ದೇಶ ಕಾಯುವೆನು
ಬಡತನವ ತೊಲಗಿಸುವೆನು
ಜಾತಿ ಮತ ಧರ್ಮ ಮೀರಿ ಸಮಾಜ ಕಟ್ಟುವೆನು
ಎಲ್ಲರ ನೋವುಗಳ ನಿರ್ಮೂಲನೆ ಮಾಡುವೆನು
ಎಂದಿತು ಬೀಗುತ ಅಭಿಮಾನದಲಿ ಬೆಪ್ಪುತಕ್ಕಡಿ
ಬೆಪ್ಪುತಕ್ಕಡಿ ಮಾತಕೇಳಿ ಗಹಗಹಿಸಿ ಹೇಳಿತು ಕಪ್ಪು ಕರಡಿ..
ಈ ಸರಕಾರ ನನ್ನದು
ವೋಟು ಹಾಕುವವರೆಗಷ್ಟೆ ಜನರು ನಾಯಕರು
ಆಮೇಲೆನಿದ್ದರು ನಮಗವರು ಸೇವಕರು
ನಾನೆಳಿದ್ದ ಕೇಳಬೇಕದವನು ನೀನು
ಸಾರ್ವಭೌಮನು ಈ ಸರಕಾರಕ್ಕೆ ನಾನು
ಮಾತು ಕೇಳದಿದ್ದರೆ ನೀನು, ಮಾಡುವೆನು ಊರಿಂದೂರಿಗೆ ಎತ್ತಂಗಡಿ
ಆಗಲು ಜಗ್ಗದಿದ್ದರೆ ನಿನಗೆಲ್ಲಿರುವುದು ಭೂಮಿಯ ಮೇಲೆ ಜಾಗ ಬೆಪ್ಪುತಕ್ಕಡಿ
ಭ್ರಷ್ಟತನವೆ ಮೈಯಲೆಲ್ಲ ತುಂಬಿ ನಾನಾಗಿರುವೆನು ಕಪ್ಪುಕರಡಿ
ಮೋಸ ಮಾಡಿ ಟೋಪಿ ಹಾಕಿ ದುಡ್ಡು ಮಾಡಿ ಅನ್ಯರ ಕಾಡಿ ಮೋಜು ಮಾಡಲು ರಾಜಕೀಯವೆ ದೊಡ್ಡ ಗರಡಿ
ಯಾರು ಹಾಕುವರು ಈ ನಾಗಲೋಟಕೆ ಲಗಾಮು ಆಗಲೆ ದೇಶವನೆ ಆಕ್ರಮಿಸಾಗಿದೆ ನಮ್ಮಂತವರೆ ಎಲ್ಲೆಲ್ಲೂ ಹರಡಿ
ಸುಮ್ಮನೆ ಹೇಳಿದಷ್ಟು ಕೇಳಬೇಕು, ಹೇಳಿದಷ್ಟು ಮಾಡಬೇಕು ಸಂಬಳ ಪಡೆಯಬೇಕು, ಕೆಲಸವಿಲ್ಲದಿದ್ದರೆ ಕೈ ಕಟ್ಟಿ ಕುಳಿತಿರಬೇಕು ಛಾವಣಿಯ ಅಡಿ
- ಶ್ರೀಕಾವ್ಯ
24 Aug 2017, 11:47 am
Download App from Playstore: