ಅವಳ ನೆನಪು....
ಬೀಸುವ ತಂಗಾಳಿ ತಂದಿದೆ ಅವಳ ಮುಂಗುರುಳ ನೆನೆಪ
ಸುಡುವ ಸೂರ್ಯನಿಗೆ ಹೋಲಿಸಬಹುದೇನೊ ಅವಳ ಕೋಪ
ಆ ಶಶಿಯೂ ಕೊಂಚ ಮೌನಿ ಕಂಡರೆ ಅವಳ ಕಣ್ಣ ಹೊಳಪ
ಅವಳು ನನ್ನೊಲವ ಸೇರಿದ ಮೇಲೆ ನನ್ನೊಳಗೆ ನಾನಿರುವುದೆ ಅಪರೂಪ
ಅವಳು ನನ್ನೆದೆಗೆ ತಂದ ಪ್ರೀತಿಯ ಮಾಯೆ
ಉಳಿಸಿದೆ ನನ್ನಲಿನ್ನೂ ಅವಳ ನೆನಪಿನ ಛಾಯೆ
ಮರೆಯಬೇಕೆಂದರೂ ಮರೆಯಾಗದ ಅವಳ ನೆನಪು
ಮತ್ತೆ ಮತ್ತೆ ಮುಖಾಮುಖಿಯಾಗಿ ಅಳಿಸುತಿದೆ ಮುಖದ ಒಳಪು
ನೋಡಲಾಗದೆ ಅವಳ ಮನಸಿಗೆ ಚಡಪಡಿಕೆ
ಬೇಡವೆಂದರು ಮತ್ತೆ ಮತ್ತೆ ಕಾಡುವವು ಮಾತುಗಳ ಒಡಂಬಡಿಕೆ
ಅವಳ ನೆನಪೆಂದೂ ನನ್ನಲಿ ಅಮರ
ಅವಳ ನೆನೆದಾಗಲೆಲ್ಲ ಅನಿಸುವುದು ಯಾರೊ ಹೊತ್ತೊಯ್ದಂತೆ ಉಸಿರ
ಅವಳ ನೆನಪೆ ನನಗೀಗ ಮಾರಕ
ಅವಳ ನೆನಪೆ ನನ್ನುಸಿರಿಗೀಗ ವಾಹಕ
ಅವಳ ನೆನಪೆ ನನ್ನ ಬದುಕ ಹಿಡಿದಿಟ್ಟಿರುವ ಜಾತಕ
ನಾನು ಅವಳ ನೆನಪೊಳಗೆ ಕಳೆದೋಗಿರುವ ಅಮಾಯಕ
- ಶ್ರೀಕಾವ್ಯ
26 Aug 2017, 10:38 am
Download App from Playstore: