ಹಣದ ದಾಹ
ಹಣದ ದಾಹದ ಎದುರು
ಪ್ರೀತಿ ವಾತ್ಸಲ್ಯದ ನುಡಿಗಳು
ಬಹುದೂರ.
ತನ್ನವರನ್ನೆ ಕಳೆದುಕೊಳ್ಳಲು
ತಯಾರಾಗಿ ನಿಂತ
ಈ ಹಾಳು
ಮನುಜನ ಕಣ್ಣಿಗೆ
ಹಣವು ಮಾತ್ರವೇ
ಗೋಚರಿಸುವುದು!
ಶ್ರೀಮಂತರ ಹುಚ್ಚು ಮೋಹಕ್ಕೆ
ಎಲ್ಲೆಲ್ಲಿಯೂ ನಡೆಯುತ್ತಿದೆ
ರಕ್ತದ ದಾಹ.
ಕೂಡಿಟ್ಟ ಹಣವ ಕರಗಿಸಲು
ಹೆಣಗಾಡುತ್ತಿದ್ದರೂ
ಇವರ ಆಸೆಯ ದಾಹ
ಎಂದೂ ಕರಗದು!
ಕೊನೆಯಿರದ ಇವರ
ಅತಿ ಆಸೆಗಳಿಗೆ
ಅದೆಷ್ಟು ಕುಟುಂಬಗಳು
ಬಲಿಯಾಗಬೇಕಿದೆಯೋ?
ಪ್ರಿಯಾಂಕ✍
- ಪ್ರಿಯಾಂಕ
27 Aug 2017, 02:43 pm
Download App from Playstore: