ಸುಂದರ ಸಂಜೆಯಲ್ಲಿ
ಇಂದು ಈ ಸುಂದರ ಸಂಜೆಯಲ್ಲಿ
ತಿಂಗಳ ಬೆಳಕಿನಲ್ಲಿ ತಂಗಾಳಿ ಸವಿಯುತ್ತ
ಹುಲ್ಲು ಹಾಸಿಗೆಯ ಮೇಲೆ ಕುಳಿತು
ನನ್ನವನ ಬರುವಿಗಾಗಿ ಕಾಯುತ್ತಿರುವೆ!!
ಅವನಿಗೇಕೋ ಇಂದು ನನ್ನ ನೆನಪಿಲ್ಲ
ನೆನಪಿದ್ದರೂ ಹುಸಿ ಮನಿಸೇ
ಬರದೇ ನನ್ನನ್ನು ಕಾಡಿಸುತ್ತಿರುವನೇ
ಇಲ್ಲಾ ನನ್ನನ್ನು ಪರೀಕ್ಷಿಸುತ್ತಿರುವನೇ!!
ಆಕಾಶದ ತುಂಬ ಅಲ್ಲಲ್ಲಿ ಮುಸುಕಿರುವ
ಮೋಡವು ಏನನ್ನೋ ಮರೆಮಾಚುತ್ತಿದೆ
ಯಾರದೋ ಹೊಳಪು ಮರೆಯಲ್ಲಿ ನಿಂತು
ನನ್ನನ್ನು ಕದ್ದು ನೋಡುತ್ತಿರುವಂತಿದೆ!!
ಅದೋ ಅಲ್ಲಿ ಮೇಲೆ ದೂರದಲ್ಲಿ
ನಕ್ಷತ್ರಗಳ ಸಾಲಿನಲ್ಲಿ ನಿಂತು ಅವನು
ಇಲ್ಲಿಯೇ ಇಣುಕಿ ನೋಡುತ್ತ ನಿಂತಿರುವ
ಬಾ ಎಂದು ಕೈ ಚಾಚಿ ನನ್ನ ಕರೆದಿರುವ!!
- ಪಿ.ಜಿ.ಜ್ಯೋತಿ
28 Aug 2017, 09:43 am
Download App from Playstore: