ಬುಡು ಬುಡಿಕೆ ಮಾಮ

ಬುಡ ಬುಡಿಸಿ ಬರುತಿರುವ‌
ಬುಡ ಬುಡಿಕೆ ಮಾಮ!!
ನೀ ಬಂದು ನುಡಿಯೋ
ನನ್ನ ತವರಿನ ಕ್ಷೇಮ!!
ತವರೂರ ಮನೆಯಲ್ಲಿ
ನನ್ನ ತಾಯಿ ತಂದೆ ಕ್ಷೇಮ!!
ಅಣ್ಣ ತಮ್ಮಂದಿರ ಸರಿ
ಬಾಂಧವ್ಯ ಕ್ಷೇಮ!!

ಬುಡ ಬುಡಿಸಿ ಬರುತಿರುವ
ಬುಡ ಬುಡಿಕೆ ಮಾಮ!!
ನೀ ಹೋಗಿ ವರಿಸೋ
ನನ್ನ ಹೆತ್ತವರ ಕಣ್ಣ!!
ನೀ ಚಿನ್ನದ ಮಾತಾಡು
ಆತಂಕ ಅಳಿಸು!!
ನನ್ನ ಕ್ಷೇಮವನ್ನು ತಿಳಿಸಿ
ನೀ ಸಂತಸದಿ ಹರಸು!!

ನನ್ನ ಅಣ್ಣ ನನ್ನ ತಮ್ಮ
ಇಬ್ಬರೂ ನನ್ನ ಕಣ್ಣು!!
ಒಳ್ಳೆಯ ನುಡಿ ನುಡಿದು
ಹುರಿದುಂಬಿಸು ನಡೆ!!
ನೀ ನಡೆವ ಹಾದಿಯಲಿ
ಹೂವು ಚೆಲ್ಲಿರಲಿ!!
ಹಿತವಾದ ಮಾತಿನಲಿ
ಸಿಹಿತನ ಇರಲಿ!!

ಹಿತವನ್ನು ನೀ ನುಡಿದು
ಹಿಂದಿರುಗುವಾಗ
ಹಾಲು ಸಕ್ಕರೆಯ ಹಂಚೋ
ಸಂಭ್ರಮವ ನೋಡ!!
ಬುಡು ಬುಡಿಸಿ ಬರುತಿರುವ
ಬುಡ ಬುಡಿಕೆ ಮಾಮ!!
ನನ್ನ ತವರೂರ ನೀ ಕಂಡು
ಹಿಂದಿರುಗು ಮಾಮ!!

- ಪಿ.ಜಿ.ಜ್ಯೋತಿ

28 Aug 2017, 10:12 am
Download App from Playstore: