ದೂರೀ ದೂರೀ ಕಂದಮ್ಮ

ದೂರೀ ದೂರೀ ಕಂದಮ್ಮ
ಜೋಗುಳವ ತೂಗಿಹನು ಚಂದ ಮಾಮ!!
ಲಾಲಿ‌ ಲಾಲಿ ಕಂದಮ್ಮ
ಸುವ್ವಾಲಿ ಹಾಡಿಹನು ಚಂದ ಮಾಮ!!

ತಂಗಾಳಿ ತಲೆದೂಗಿ ಬಂತು
ಮನೆಯ ಅಂಗಳದಿ ನಿನ್ನ ಕಾದು ನಿಂತು!!
ಹುಣ್ಣಿಮೆಯೇ ಧರೆಗಿಳಿದು ಬಂತು
ನಿ‌ನ್ನ ನಿದಿರೆಯಲಿ ಕನಸಾಗಲು ಎಂದು!!

ಇರುಳಲ್ಲಿ‌ ಹೊಳೆಯುವ ಬೆಳಕು
ಕಂದ ನೀನಾದೆ ಈ ನಮ್ಮ‌ ಮನೆಗೆ!!
ನಿನ್ನ ನಗುವಲ್ಲಿಯೂ ನಿನ್ನ ಅಳುವಲ್ಲಿಯೂ
ಜೊತೆಯಾಗುವ ಆಣೆಯ ನಾ ಇಡುವೆ!!

- ಪಿ.ಜಿ.ಜ್ಯೋತಿ

28 Aug 2017, 02:43 pm
Download App from Playstore: