ಅವಳಿಲ್ಲದ ಗಳಿಗೆ
ವಿರಹದಲ್ಲಿ ಬೆಂದಿದ್ದರೂ
ಅವಳನ್ನೇ ಕಾದಿರುವೆ!!
ಅವಳು ಒಮ್ಮೆ ಬರಲು ಇಲ್ಲಿ
ನನ್ನ ಮನವು ಚಿಗುರುವುದು!!
ಬಾಳಿನಲ್ಲಿ ಸಿಹಿಯ ಕೊಡುವ
ಸಕ್ಕರೆಯ ಗೊಂಬೆ ಅವಳು!!
ನಗುವಿನ ಸ್ವರ್ಗವ ಧರೆಗೆ
ನನಗಾಗಿ ತಂದವಳು ಅವಳು!!
ಅಕ್ಕರೆಯ ಮಾತನು ಆಡಿ
ನನ್ನ ಹೃದಯ ಸೇರಿದವಳು!!
ಅವಳಿಲ್ಲದ ಪ್ರತಿ ಗಳಿಗೆ
ನಶ್ವರವು ಈ ನನ್ನ ಬದುಕು!!
- ಪಿ.ಜಿ.ಜ್ಯೋತಿ
28 Aug 2017, 04:02 pm
Download App from Playstore: