ಬೈತಲೆಯ ಬೊಟ್ಟು
ಅವಳ ನೆತ್ತಿಯ ಇಳಿಜಾರಿನಿಂದ
ಇಳಿದು ಬಂದ ಚಿನ್ನದ ಬೊಟ್ಟು!!
ಶೋಭಿಸುತ್ತಲಿ ಇರುವುದು
ಅವಳ ಹಣೆಯ ಮೇಲೆ ಹೊಳೆದು!!
ಸಿಂಧೂರ ಬಿಂದುಗೆಯ ಜೊತೆಯಲ್ಲಿ
ಬೀಗುತಿಹುದು ಈ ನೆತ್ತಿಯ ಬೊಟ್ಟು!!
ಸುಂದರಿಗೆ ಸಿಂಗಾರದ ಆಭರಣವು
ಧರಿಸಿರುವ ಈ ಬೈತಲೆ ಬೊಟ್ಟು!!
ಚಂದೊಳ್ಳಿ ಚೆಲುವೆಯ ಅಂದದ ಗುಟ್ಟು
ತನ್ನೊಳಗೆ ಅಡಗಿಸಿದೆ ಬೈತಲೆ ಬೊಟ್ಟು!!
ನೆತ್ತಿಯ ಮೇಲಿಂದ ಹಣೆಯ ವರೆಗೂ
ಅದರದೇ ಸಾಮ್ರಾಜ್ಯ ಅದು ಇರುವ ವರೆಗೂ!!
- ಪಿ.ಜಿ.ಜ್ಯೋತಿ
28 Aug 2017, 05:40 pm
Download App from Playstore: