ರೈತ
ಮಳೆಗೋಸ್ಕರ ರೈತ ಕಾಯಲು
ಮುಂದಿದ್ದ ಬರಗಾಲ ಕಾಡಲು
ಮತ್ತೆ ಮತ್ತೆ ಮೋಡ ನೋಡಲು
ಹಿಂಜರಿಕೆ ಏನನ್ನೂ ಮಾಡಲು
ಕಾದು ಕಾದು ಹೆಚ್ಚಾಯ್ತು ರೈತನ ಗೋಳು
ರಾಜಕೀಯದಲ್ಲಿ ಬೆಲೆ ಇಲ್ಲದಂತಾಯಿತು ರೈತನ ಬಾಳು
ಯಾಕೆಂದ್ರೆ ಇವರು ದುಡ್ಡು ತಿನ್ನುವ ಹುಳುಗಳು
ರೈತನಿಗು ಸಿಗಲಿಲ್ಲ ಅನ್ನದ ಕಾಳು
ಬೇಸತ್ತು ಹೊರಟ ಆ ಕೊನೆಯ ಕ್ಷಣಗಳು
ರೈತ ಸತ್ತಾಗ,ಮೋಡ ನೋಡ್ತಿದ್ವು ಕಣ್ಗಳು
ಮುಷ್ಟಿಯಲ್ಲಿ ಮಣ್ಣು ಹಿಡಿದಿದ್ವು ಕೈಗಳು....
- Yashwanth
28 Aug 2017, 07:21 pm
Download App from Playstore: