ಪ್ರಕೃತಿ...
ಆಗುತಿದೆ ಬರಿದು..
ಪ್ರಕೃತಿಯ ಮಡಿಲು..
ಕಟ್ಟಡಗಳು ಮೇಲೇದ್ದು..
ಮರಗಿಡಗಳ ಕಡಿದು..
ನದಿಕೆರೆಗಳ ಒತ್ತಿಒತ್ತಿ..
ಹಸಿರು ಜಾಗಗಳ ನುಂಗಿ..
ಒಂದಿಷ್ಟು ಜಾಗ ಬಿಡದಂಗೆ..
ನುಂಗುತ ಎಲ್ಲವನು ತಿಮಿಲಿನಂಗೆ..
ಎಲ್ಲವೂ ನಶಿಸಿ ಪ್ರಕೃತಿಯ ಅಳಿಸಿ
ಮಾಡುತಿಹರು ಭೂಮಿಯನು..
ಒಂದು ಮರುಭೂಮಿಯಂಗೆ....
ಮೂಕ ಪ್ರಾಣಿಪಕ್ಷಿಗಳಿಗಿಲ್ಲ..
ಜೀವಿಸಲು ಜಾಗ..
ವೇದನೆ ನುಂಗಿ..
ಮಾಡುತಿವೆ ಪ್ರಾಣತ್ಯಾಗ..
ಕಂಡರೂ ತಿಳಿದರೂ
ಕುರುಡನಾಗಿಹನು
ಈ ಮನುಜ ಕೂಡ....
ಮರೆತು ತನಗಿತ್ತ ಸ್ಥಾನಮಾನ..
ತನಗೆ ತಾನೆ ತರುತಿಹನು ಅವಸಾನ..
ಪ್ರಕೃತಿ ವಿಕೋಪಕ್ಕಿಲ್ಲ ಯಾರು ಸಮಾನ..
ಆಗುವುದು ಮನುಜನ ಬಲಿದಾನ..
ಕೊನೆಗೆ ತನಗೆ ತಾನೆ ಕೊಡಲಿ ಆಗುತಾನ....
- KR Sreekamala
28 Aug 2017, 10:23 pm
Download App from Playstore: