ಯಾರಿಗಾಗಿ ಕಾದಿರುವೆ
ರೇಷಿಮೆಯ ಲಂಗ ತೊಟ್ಟ ಮಲ್ಲಿಗೆ
ನಿನ್ನ ಆಸೆ ಏಕೇ ಸೀರೆಯ ಎಡೆಗೆ ವಾಲಿದೆ
ಸೆರಗ ಅಂಚಿನಲ್ಲಿ ಪ್ರೀತಿಯ ಗಂಟು ಕಟ್ಟಿ
ನೀ ಯಾರಿಗಾಗಿ ಕಾದು ಕುಳಿತಿರುವೇ!!
ನಿನ್ನ ಘಮ್ಮ್ ಎನ್ನುವ ಪರಿಮಳಕೆ
ಮೈ ಜುಮ್ ಎನಿಸುವ ಸತ್ವ ಇದೆ!!
ನಿನ್ನ ಕಣ್ಣ ಅಂಚಿನ ನೋಟವದು
ಯಾರನು ನೋಡಲು ಕಾದಿಹುದು!!
ನಿನ್ನ ಹರೆಯದ ಮನಸು ಕಾತರಿಸಿ
ಇಂದು ಯಾರ ಬರವನು ಕಾದಿಹುದು!!
ಹುಡುಗಾಟವೇ ತುಂಬಿದ ಮೊಗದಲ್ಲಿ
ನಾಚಿಕೆಯು ಎದ್ದು ಕುಳಿತಿಹುದು!!
ನಿನ್ನ ಮಂಜಿನ ಕಣ್ಣಿನಲ್ಲಿ ಮೋಹ ಇದೆ
ಯಾರದ್ದೋ ಒಲವಿನ ಸೆಳೆತ ಇದೆ!!
ಈ ವಯ್ಯಾರ ಯಾರಿಗಾಗಿ ಸುಂದರಿ
ನೀ ಕಾದಿರುವುದು ಯಾರಿಗಾಗಿ ಸುಂದರಿ!!
- ಪಿ.ಜಿ.ಜ್ಯೋತಿ
30 Aug 2017, 03:36 pm
Download App from Playstore: