*ಅಮ್ಮನ ಮಡಿಲು*

ಕೈತುತ್ತು ತಿನ್ನಿಸಿ
ಜೋಗುಳ ಪದ ಹಾಡಿ
ಮಲಗೆಂದು ಹೇಳುತ
ತಾನು ನಿದ್ರಿಸಳು ನನ್ನಮ್ಮ!

ಜಗತ್ತಿನ ಎಲ್ಲಾ ಸಂತಸವು
ತನ್ನ ಮಗುವಿಗೆ ಮೀಸಲಿರಿಸೆಂದು
ಅರೆಬಿರಿದ ಗೋಡೆಯ ಬದಿಯಲ್ಲಿ
ದುಃಖವ ಅಡಗಿರಿಸುವಳು ಕಂಬನಿಯಲ್ಲಿ!

ಸಾಗದ ನೀರಿಗಿಂತಲೂ ಆಳ
ನಿನ್ನ ಮಮತೆಯ ಮಡಿಲು
ಅಪ್ಪುಗೆಯ ಸವಿಯಲ್ಲಿದೆ
ನಿನ್ನ ಅಕ್ಕರೆಯ ಸವಿಮುತ್ತುಗಳು!

ನಿನ್ನ ಕಣ್ಗಳಲ್ಲಿ ಕಾಣುವ
ಹೊಂಗನಸುಗಳು ಹೇಳುತ್ತಿವೆ ಇಂದು
ನೀ ಸಾಗುವ ಹಾದಿಯಲ್ಲಿ
ನಗುವಿನ ಹೆಜ್ಜೆಗಳಿವೆ ಎಂದು!

ಸಾವಿರ ಜನುಮವಿದ್ದರೂ
ನಾ ಬಯಸುವೆ ಎಂದೆಂದು
ನಿನ್ನ ಮಡಿಲಲ್ಲಿ ಮಗುವಾಗಿ
ನಿನ್ನ ನಗುವನ್ನು ನೋಡುವಾಸೆ!

- ಪ್ರಿಯಾಂಕ

31 Aug 2017, 08:17 pm
Download App from Playstore: