ಹೋಲಿಕೆಯ ತೊಳಲಾಟ!

ನೀನು ನಿಂತ ಈ ನೆಲ
ನನ್ನ ಪ್ರೇಮ ದೇಗುಲ
ಪ್ರೀತಿ ಬೆಳೆಸಿದ ಹೊಲ

ಕಣ್ಣಲ್ಲಿ ವರ್ಣದ ಹಾಲಾಹಲ
ಮನಸ್ಸು ಉಕ್ಕಿಸುವುದು ಜೀವಜಲ
ಹೃದಯ ಕಂಪಿಸುವುದು ಉಜ್ವಲ

ಪ್ರಕೃತಿ ಸೌಂದರ್ಯಕ್ಕೆ ಅಮಲ
ಅದು ಹೊಳೆಯುವುದು ಮಲಮಲ
ಬೇಡದೆ ಕೊಡುವುದು ಫಲ

ಕುಳಿತು ಹೋದ ಜಾಗ ಕೂತುಹಲ
ಅದು ಆತ್ಮ ತೃಪ್ತಿ ನೀಡಿವ ಶಕ್ತಿಯ ಜಾಲ
ಕಲ್ಪನೆಗಳನ್ನು ಭೀತ್ತರಿಸುವ ಸ್ವರ್ಗಸ್ವರ್ಗದ ಬಾಗಿಲ

ಅಂಧದ ಶೃಂಗಾರದ ಕಾಲ
ಎಲ್ಲೆಡೆಯೂ ಆಕರ್ಷಣೆಯೇ ಮೇಲ
ದೇಹ ಹೊಂದಾಣಿಕೆ ಬಲಾಬಲ

ಸಮಾಜ ಒಂದು ಇಂದ್ರ ಜಾಲ
ಕೊಡುವುದು ಶಿಕ್ಷೆಯ ಸಾಲ(ಮದುವೆ)
ಸಾಲ ತೀರಿಸಲು ಆಗಬೇಕು ಸಬಲ

ನೀನು ಕಸ್ತೂರಿ ಪರಿಮಳ ಕಲ್ಪ
ಪಡೆಯಲು ನಾನು ಅಲ್ಪ
ಮನಸ್ಸು ಬದಲಾಯಿಸು ಸ್ವಲ್ಪ

ನೀ ಉದ್ಯಾನದಲಿ ಅರಳಿದ ಕಮಲ
ನಾ ನೀರು ಎರೆಯಲು ಅಬಲ
ನಿನ್ನದೆ ದಾರಿಯಲಿ ಇರು ನಿಶ್ಚಲ

ನಿನಗೆ ಸಂಬಂಧಗಳ ಬಳ್ಳಿಯ ಸಾಲುಸಾಲ
ನೀನು ಅವರದೆ ಒಂದು ಕೋಲ
ಅದನ್ನು ಬಿಸಲು ಅವರು ಪ್ರಬಲ

ನಿನಗೆ ನಾನಲ್ಲ ಸಮಬಲ
ಅದಕ್ಕೆಲ್ಲ ಬೇಕು ಧೈವಬಲ
ನಾವೆಲ್ಲ ಹಿರೇಉಳ್ಳಿಗೇರಿ ಕರೆಮ್ಮ ಆಡಿಸುವ ಗೊಂಬೆಗಳೆಲ್ಲ

- MB

31 Aug 2017, 09:17 pm
Download App from Playstore: