ನಿನ್ನೇದೆಯ ಅಂಗಳದಿ
ಬರೆಯುವ ಮುನ್ನ ನಾ ಅದ್ದಿದ್ದೆ ಚೆಲುವೆ
ಅಕ್ಷರಗಳ ನಿನ್ನಾ ನಗೆಯ ಹೊಳೆಯಲಿ.....
ನೀ ನೋಡು,,ನ ನಿನ್ನಂತೆ ನಗುತಿಹುದು
ಬ ಬಳುಕಿಹುದು,ಕ ಕುಣಿಯುತಿಹುದು...
ಬಿತ್ತಿದ್ದೆ ಭಾವಗಳ ನಿನ್ನೆದೆಯ ಅಂಗಳದಿ
ನೋಡಲ್ಲಿ ಆ ನನ್ನ ಕವಿತೆ ಮೊರೆದಿಹುದು
ಭಾವ ಸಾಗರದ ಬಹು ಸುಂದರ ಅಲೆಗಳ......
ನಾ ನಿನಗಾಗಿ ಕಟ್ಟಿದ್ದೆ ಬಣ್ಣ ಬಣ್ಣದ ಕನಸ
ನನ್ನೆದೆಯ ಬಾಂದಣದ ಆ ಬಿಳಿ ಬೆಳಕಿನಲಿ......
ನೋಡಲ್ಲಿ ಮೂಡಿಹುದು ನಿನಗಾಗಿ ಒಲವ
ಕಾಮನ ಬಿಲ್ಲು ಬಹು ಬಣ್ಣಗಳ ತಾ ಹೊತ್ತು.....
- ಅನಾಮಿಕ..........
01 Sep 2017, 06:59 am
Download App from Playstore: