ಅವಳು ಮುಡಿದ ಮಲ್ಲೆ ಮೊಗ್ಗು

ಅವಳು ಮುಡಿದ ಮಲ್ಲೆ ಮೊಗ್ಗು
ಅವಳ ಕೊರಳ ಸೇರುವ ಬಯಕೆಯಿಂದ
ಮೆಲ್ಲಗೆ ಅವಳ ಮುಡಿಯಿಂದ ಜಾರಿತು!!

ಮುಡಿಯಿಂದ ಜಾರಿದ ಮೊಗ್ಗು
ಅವಳ ಕೊರಳ ಸೇರದೇ
ಹರಿವ ನೀರಿನಲ್ಲಿ ಬಿದ್ದು ಹೋಯಿತು!!

ಹರಿವ ನೀರಿನಲ್ಲಿ ತೇಲುತ್ತಿದ್ದ ಆ ಮೊಗ್ಗು
ಅವಳಿಂದ ದೂರಾದರೂ
ಅವಳ ಕೊರಳ ಸೆಳೆತ ದೂರಾಗಲಿಲ್ಲ!!

ಹರಿವ ನೀರಿನೊಡನೆ ಬಳುಕಿ ಸಾಗರ ಸೇರಿ
ಅಲ್ಲಿ ಕಪ್ಪೇ ಚಿಪ್ಪಿನಲ್ಲಿ ಸ್ಥಾನ ಪಡೆದು
ಅವಳಿಗಾಗಿ ಹಂಬಲಿಸಿ ತಪವ ಗೈದಿತು!!

ತಪಸ್ಸಿಗೆ ದೊರೆತ ವರದಂತೆ ಆ ಮೊಗ್ಗು
ಮುತ್ತಾಗಿ ಯಾರದೋ ಕೈ ಸೇರಿ
ಮುತ್ತಿನ ಹಾರದಲ್ಲಿ ಬೆರೆತು ನಳ ನಳಿಸಿತು!!

ಆ ಮುತ್ತಿನ ಹಾರ ಅವಳನ್ನು ಆಕರ್ಷಿಸಿ
ಕೊರಳನ್ನು ಅಲಂಕರಿಸುವ ಒಡವೆಯಾಗಿ
ಮರಳಿ ಅವಳನ್ನು ಸೇರಿ ಸಂಭ್ರಮಿಸಿತು!!

- ಪಿ.ಜಿ.ಜ್ಯೋತಿ

01 Sep 2017, 09:39 am
Download App from Playstore: