ಬಚ್ಚಿಟ್ಟ ಮನಸು
ಬಚ್ಚಿಟ್ಟ ಮನಸಿನಲ್ಲಿ
ನೀ ಬಂದ ಮೇಲೆ ಸ್ವಾರ್ಥ!!
ಕೂಡಿಟ್ಟ ಆಸೆಗಳೆಲ್ಲ
ನಿನಗಾಗಿಯೇ ತಾನೇ ಸ್ವಂತ!!
ಈ ಬಾಳಿನ ಸರಿಗಮದಲ್ಲಿ
ನಿನ್ನದೇ ರಾಗ ತಾಳ!!
ಈ ಬದುಕಿನ ಸಮಾಗಮಕ್ಕೆ
ಇದುವೇ ಗಟ್ಟಿ ಮೇಳ!!
ನೀ ಇರಲು ಜೊತೆಯಲ್ಲಿ
ನಾ ಇಲ್ಲ ನನ್ನಲ್ಲಿ!!
ನಿನ್ನ ನಗುವಿನ ಜೊತೆಯಲ್ಲಿ
ಮಗುವಾದೆನು ನಾನಲ್ಲಿ!!
ಈ ಹಗಲು ಈ ಇರುಳು
ಎಲ್ಲಾನೂ ಸೊಗಸು!!
ಪ್ರತಿ ಗಳಿಗೆ ನಿನ್ನ ಜೊತೆಗೆ
ಸಂಭ್ರಮಿಸಿದೆ ಈ ಮನಸು!!
- ಪಿ.ಜಿ.ಜ್ಯೋತಿ
01 Sep 2017, 09:56 am
Download App from Playstore: