ನಾನೊಂದು ಗಗನ
ಯಾರೊಂದುಗೂ ಬೆರೆಯದ ಅಗಸವು ನಾನು ನೋಡಲಷ್ಟೇ ಚಂದ ಕೈಗೆಟುಕದೇನೆ ಕೊಡುವೆನು ಆನಂದ ವೈಶಾಲ್ಯತೆ ನನ್ನ ಊರು
ಕಣ್ಣೀರ ಸಾಗರ ನನ್ನ ಉಸಿರು...............
ಭೋರ್ಗರಿದು ಮಿಂಚುಗಳೊಡನೆ
ಆಟವಾಡುವೆನು ಗುಡುಗಿನ ಸದ್ದಿಗೆ ಬೆಚ್ಚಿ ಬಿದ್ದು ಕತ್ತಲಾಗುವೆನು...............
ನೋಡುವಷ್ಟು ದೂರ ಭುವಿಮೆಲೆ ನಿಂತ ಜನರು ನನ್ನ ಕಣ್ಣಿಗೆ ದಿನನಿತ್ಯ ಕಾಣುವರು ಆದರೆ ಅವರ ಒಳಗಿನ ಕಲ್ಮಶ,ಸ್ವಾರ್ಥ ನನಗೆಂದಿಗೂ ತಿಳಿಯುದಿಲ್ಲ................
ನನ್ನತ್ತ ಕಣ್ಣೆತ್ತಿ ನೋಡಿದವರ ನೋವು ನೋಡುವೆ ನೊಂದ ಮನಗಳ ವ್ಯಥೆಯನ್ನು ನಾನರಿತು ನಲಿವು ತುಂಬುವೆ...............
ಬಿಸಿಲೆಂದು ಸೋತು ನೆರಲಾಸರೆ ಬೇಡಿದವರಿಗೆ ಮೋಡಗಳ ಅಡ್ಡಿಯಾಕಿ ಮನಸಾರೆ ಕಣ್ತುಂಬಿ ಮಳೆಯಾಗುವೆ................
ಚಳಿಯೆಂದು ನಡುಗುವವರಿಗೆ ಸೂರ್ಯನ ಕಿರಣಗಳ ಕರೆತಂದು ಶಾಖವನ್ನು ನಾನಿಡುವೆ
ದಿನನಿತ್ಯ ದುಡಿದು ಬೆಂದವರಿಗೆ ರಾತ್ರಿಯ ಚಂದಿರನ ತಂಪಾಗಿ ಕರೆತರುವೆ.............
ನಿಮ್ಮ ನಗೆಯನ್ನು ನೋಡುವಾಸೆಯಿಂದ ನಕ್ಷತ್ರಗಳ ಕಾಂತಿ ಇರುಳಲ್ಲಿ ನಾ ತುಂಬುವೆ.......
ಎಲ್ಲರಂತೆ ನಾನಿಲ್ಲ ನಾನೆಂದಿಗೂ ನನ್ನ ನಿಷ್ಕಲ್ಮಶ ಮನಸೊತ್ತಾ
ಹೊತ್ತ ಗಗವೇ.................
- ಚುಕ್ಕಿ
02 Sep 2017, 10:14 am
Download App from Playstore: