ವರುಣ ದೇವ

ಯಾಕಿಷ್ಟು ಮುನಿಸಿಕೊಂಡಿಹನು
ವರುಣ ದೇವನು..
ನೊಂದ ಹೆಣ್ಣಿನ ಅಳುವಿನಂತೆ
ನಿಲ್ಲದೆ ಸುರಿಯುತಿಹನು..
ಕಾಡಿ ಬೇಡಿ ಪೂಜೆ ಮಾಡಿದರು
ರೈತರ ಕಣ್ಣೀರಿಗೆ ಕರಗದವನು..
ಕ್ಷಣಕಾಲದಲೆ ರಕ್ಕಸ ಬಕಾಸುರನಂತೆ
ಊರಿಗೂರನ್ನೆ ನುಂಗಿಬಿಡುತಿಹನು..
ಬಾರದಿದ್ದರೆ ಬರಗಾಲದ ಹಸಿವಿನ ಸಾವು
ಬಂದರೆ ಬದುಕಲಾರದಂತ ಹಿಂಸೆಯ ನೋವು...
ಅನಾಮಿಕ..........

- ಅನಾಮಿಕ..........

02 Sep 2017, 05:49 pm
Download App from Playstore: