ಅಣ್ಣ-ಅತ್ತಿಗೆ
ಹೊಸ್ತಿಲಲ್ಲಿ ನಿಂತು ಹೇಳುವೆ ಅಣ್ಣಯ್ಯ ಅತ್ತಿಗೆಯು ನನ್ನ ತಾಯಿಯೆಂದು ದೇವರು ಕೊಟ್ಟ ನವ್ಯ ನಲಿವೆಂದು.
ಈ ಹೊಸಲು ನಮ್ಮ ಅಡೆದವ್ವನ ಪ್ರತಿಬಿಂಬ
ಅರಿಶಿನ-ಕುಂಕುಮ ಹಚ್ಚಿ ಮನದಲ್ಲಿನ ಮಲ್ಲಿಗೆ ಮೂಡಿಸಿ ಬೇಡು ನನ್ನತ್ತಿಗೆ ನೀ ಮೆಟ್ಟಿದ ಮನೆ ಸುಖ ಸೌಭಾಗ್ಯಗಳೊಂದಿಗೆ ಹರುಷದಾಯಕವಾಗಿರಲೆಂದು.
ಕೇಳಯ್ಯ ಅಣ್ಣಯ್ಯ ತೋರು ನನ್ನ ಅತ್ತಿಗೆಗೆ ಮೊದಲ ಗೌರವ ನಿನ್ನ ಹೆತ್ತ ತಾಯಿಯು ಹೆಣ್ಣಾದ ಕಾರಣಕೆ.
ಅವಳ ನಿನ್ನ ಆರೈಕೆಯಿಂದ ತುಂಬಿರಲಿ ಕಟುಕನೆಂಬ ಶಾಪದಿಂದಲ್ಲ.
ನಾಳೊಂದು ದಿನ ನನ್ನ ನಾನಿಡುವೆ ಒಂದೆಜ್ಜೆಗೆ ಈ ನನ್ನ ತವರಲ್ಲಿ ನಿನ್ನಿಂದಲೇ ಪಡೆಯಬೇಕು ತಾಯಿ ಪ್ರೀತಿಯ ನಾನು ನನ್ನತ್ತಿಗೆಯ ಮಡಿಲಲ್ಲಿ.
- ಚುಕ್ಕಿ
02 Sep 2017, 08:45 pm
Download App from Playstore: