ನಶೆ(ಗಜಲ್)
ನಶೆ(ಗಜಲ್)
---------------
ಆತ್ಮನಿಗಿಲ್ಲದ ನಶೆ ನಿನಗೇತಕೆ ಚಲುವೆ,ಈ ದೇಹ
ಪರಿಪರಿಯಾಗಿ ಕಾಡುವ ನಿನ್ನ ಹಠ ಸದಾ ವಿದೇಹ
ಕುಡಿದಾಗ ಎದೆಯುರಿ ಒಳನುಗ್ಗಿದಾಗ ಆನಂದ,ನಶೆ
ಕುಡಿಯದಿದ್ದರೂ ಸದಾ ಅಮಲು, ತೇಲುವೆ ನಾ ನಿನ್ನೊಳಗೆ.
ಆತ್ಮನ ಔದಾರ್ಯಕ್ಕೆ ದೇಹ ದೌರ್ಜನ್ಯವೆಸಗಿದ್ದರೂ
ನೀ ಬಂದು ಸೇರಲೇಬೇಕಲ್ಲ ನನ್ನೊಳಗೆ,
ಎಂದಾದರೂ.
ಸಿಡಿಲು ಗರ್ಜಿಸಲು ಮೋಡಗಳು ಸೇರುವಂತೆ
ಮಳೆ ಬರುವ ಮುಂಚೆ ಉಕ್ಕಿಬಿಡಲಿ ಪ್ರೀತಿ,
ನಾನಂದುಕೊಂಡಂತೆ.
ಅವರಿವರೆನ್ನುವ ಹಾಗೆ ಸತ್ತ ಮೇಲೆ ಕಟ್ಟಿದ ಆ ತಾಜಮಹಲು ನಾ ನೋಡಿಲ್ಲ
ಒಮ್ಮೆಯಾದರೂ ತೇಲಾಡೋಣ ಈ ಜೀವಂತ
ಪ್ರೀತಿಯಲ್ಲಿ.
-- ಸುರೇಶ ಜಕಾತಿ.ಜಮಖಂಡಿ
8746086658
- ಸುರೇಶ ಜಕಾತಿ.ಜಮಖಂಡಿ
02 Sep 2017, 10:36 pm
Download App from Playstore: