ಮೌನ ಪ್ರೇಮ

ನೆನಪಿನೊಂದಿಗೆ ಬರುವುದು ಕಣ್ಣಹನಿಯೊಂದ
ಆ ಆಕರ್ಷಣೆ ಆನಂದ
ನೋಟದಲ್ಲಿ ಉಳಿದ ಸಂಬಂಧ
ಮೌನವೆ ಅದಕ್ಕೆ ಅನುಬಂಧ

ಆ ಪವಿತ್ರ ಪ್ರೇಮ ಬಂಧ
ಎದೆ ಗಟ್ಟಿ ಹಿಡಿಸುತಿತ್ತು ಗಂಭೀರದಿಂದ
ಮರೆಯಾದಾಗ ನಿಟ್ಟುಸಿರು ಬಿಡಿಸುತಿತ್ತು ನಿಧಾನದಿಂದ
ಆದ್ರು ಹನಕಿ ಹಾಕುತಿತ್ತು ಮನದ ಒಳಗಿಂದ

ಚಿತ್ರವನ್ನು ಹಿಡಿದಿಟ್ಟುಕೊಂಡಿದೆ ಕಲ್ಪನೆಯಿಂದ
ಇಷ್ಟ ಪಡುವ ಬಣ್ಣ ಪಿಂಕೊಂದ
ಇದ್ದಿತು ಕೆಂಡಸಂಪಿಗೆಯಿಂದ
ನಗು ಪ್ರಕಾಶಿಸುತಿತ್ತು ಚಂದ್ರನ ಬೆಳದಿಂಗಳಿಂದ

ವಿಕರ್ಷಣೆ ಮಾಡಿತು ಬೇರೊಂದ
ತಲೆ ತಗ್ಗಿಸಿತು ನಾಚಿಕೆಯಿಂದ
ಮಾತನಾಡಿಸಲಾಗದ ಸಂಕಟದಿಂದ
ಕೋರಗಿತು ವಿರಹದಿಂದ

ಎಲ್ಲೋ ಇರು ದೇವರ ಆಶೀರ್ವಾದಿಂದ
ಅಪರೂಪಕ್ಕೆ ಕಂಡರೆ ಮುಗುಳ್ನಗು ಸಂತೋಷದಿಂದ
ಅಷ್ಟೇ ಸಾಕು ಮೌನ ಪ್ರೀತಿಗಾರನಿಗೆ ಆನಂದ
ಹಿರೇಉಳ್ಳಿಗೇರಿ ಕರೆಮ್ಮಳ ಆಟದಲ್ಲಿ ಕಳಕೊಂಡ ಬೆಳ್ಳಿಮೋಡ ನಿನೊಂದ

- MB

03 Sep 2017, 09:43 pm
Download App from Playstore: