ನೆನಪಿನ ಅಂಗಳದಲ್ಲಿ

ಅಂಗಳದಲ್ಲಿ ಆಡಿ ಜಾರಿ
ಬಿದ್ದಾಗ ಕಣ್ಣಿಂದ ಮುತ್ತುಗಳುಜಾರಿ
ತಾಯಿಯ ಸೆರಗಲ್ಲಿ ಉಜ್ಜಿದನೆನಪು.....

ತಂದೆಯ ಹೆಗಲ ಮೇಲೆ ಕುಳಿತು
ಜಾತ್ರೆಯ ನೋಡಿದ ನೆನಪು....
ತೊಟ್ಟಿಲಲಿ ಮಲಗಿ ಸೋದರನ
ಕಾಲಿನಲಿ ಮೆಟ್ಟಿದ ನೆನಪು....

ಹಸಿ ಎಲೆಗಳ ಚೂರು ಮಾಡಿ
ಹಲವು ಕಸಗಳ ಪದಾರ್ಥವ ಮಾಡಿ
ಮರದಡಿಯಲ್ಲಿ ಊಟವಬಡಿಸಿದ ನೆನಪು....
ಮಂಗಗಳ ಹಾಗೆ ಮರವನೇರಿ
ಹಣ್ಣು ಮಾವುಗಳ ಮರದಲ್ಲೇ ತಿಂದ ನೆನಪು....

ಗುಂಡು ಮಲ್ಲಿಗೆಯ ಕೊಯ್ದ
ಸೂಜಿ ದಾರದಿ ನೆಯ್ದು
ಪರಿಮಳವ ಗ್ರಹಿಸಿದ ನೆನಪು....

ಹಚ್ಚ ಹಸಿರಾಗಿಯೇಯಿದೆ ಈಮನ
ಏನು ಮನೊಹರವಾಗಿತ್ತಾ ಜೀವನ
ಮರೆಯಲಾರೆ ಕೊನೆವರೆಗೊ ಒಂದೊಂದು ಕ್ಷಣ...

✍ ಅರುಣ್. ಕೆ. ಗಟ್ಟಿ. ಕಾಪಿಕಾಡ್

- ಅರುಣ್. ಕೆ. ಗಟ್ಟಿ. ಕಾಪಿಕಾಡ್

03 Sep 2017, 11:11 pm
Download App from Playstore: