ಮಾಮೂಲಿ ಎಲ್ಲ ಮಾಮೂಲಿ

ನಿದಿರೆ ಬಂದ ಮೇಲೆ ಕನಸು ಮಾಮೂಲಿ
ಕೋಪ ಬಂದ ಮೇಲೆ ಮುನಿಸು ಮಾಮೂಲಿ!!
ಹರೆಯ ಬಂದ ಮೇಲೆ ಪ್ರೀತಿ ಮಾಮೂಲಿ
ಕೆರೆಯ ನೀರಿನಲ್ಲಿ ಕಮಲ ಮಾಮೂಲಿ!!

ಈ ಆಸೆಯು ರೆಕ್ಕೆಯ ಬಡಿಯುವ ಮೊದಲು
ಹೇಳು ಬಾ ನೀನೂ ಎಲ್ಲವೂ ಮಾಮೂಲಿ!!
ಈ ಕನಸಿಗೆ ಬಣ್ಣ ಬಡಿಯುವ ಮೊದಲು
ನೋಡು ಬಾ ನೀನೂ ಎಲ್ಲವೂ ಮಾಮೂಲಿ!!

ನೋಡುವ ಮೋದಲು ಇರುವ ಕಲ್ಪನೆಯು
ನೋಡಿದ ಮೇಲೆ ಆಯಿತು ಮಾಮೂಲಿ!!
ಬದುಕಿನ ಆಟದಿ ಸ್ಪರ್ಧಿಸಿದ ಮೇಲೆ
ಸೋಲೂ ಗೆಲುವೂ ಎರಡೂ ಮಾಮೂಲಿ!!

ಮಾಮೂಲಿ ಈ ಬದುಕು ಮಾಮೂಲಿ
ನಿನ್ನಲ್ಲಿನ ನನ್ನ ಇರುವಿಕೆಯು ಮಾಮೂಲಿ!!
ನಮ್ಮಲ್ಲಿನ ಈ ಪ್ರೀತಿಯ ಬಯಕೆಯ
ಅತಿ ಸುಂದರ ಭಾವವಿದು ಎಲ್ಲ ಮಾಮೂಲಿ!!

- ಪಿ.ಜಿ.ಜ್ಯೋತಿ

05 Sep 2017, 10:26 am
Download App from Playstore: