ನೆನಪಿನ ಪುಟದಲಿ

ಅಪ್ಪನ ಹೆಗಲೇರಿ
ಕೂಸುಮರಿಯ ಮಾಡಿಸಿಕೊಂಡು
ಅಂಗಳದ ತುಂಬೆಲ್ಲ ಓಡಾಡಿದ ನೆನಪು
ಮನದಂಗಳದ ಮೂಲೆಯಲ್ಲಿ
ಅಡಗಿಕುಳಿತಿದೆ!
ಬೆಳದಿಂಗಳ ರಾತ್ರಿಯಲಿ
ಉಣಬಡಿಸುತ್ತಿದ್ದ ಅಮ್ಮನ
ಕೈತುತ್ತಿನ ಸವಿರುಚಿಯಲಿ
ಬೆಳೆದು ನಿಂತಿಹೆನು ನಾನಿಂದು
ಮನೆಯಂಗಳದಲಿ ಬಿಡಿಸಿದ್ದ
ರಂಗೋಲಿಯ ಮೇಲೆ ಕಾಲಿಟ್ಟು
ಬಣ್ಣ ಮೆತ್ತಿದ ಹೆಜ್ಜೆಯಲ್ಲಿ
ಮನೆಯ ತುಂಬೆಲ್ಲಾ ಓಡಾಡಿ
ಅಮ್ಮನ ಹುಸಿಕೋಪಕ್ಕೆ
ಹೆದರಿ ಅವಿತು
ಮುನಿಸಿಕೊಂಡಿರಲು,
ಅಜ್ಜಿಯ ಮುದ್ದುಮನಸಿನ
ಸಮಾಧಾನದ ನುಡಿಗಳು
ನೆನಪಿನಂಗಳದ ಪುಟದಲಿ
ಅಚ್ಚಳಿಯದೇ ಉಳಿದಿದೆ ಇಂದು!

- ಪ್ರಿಯಾಂಕ

05 Sep 2017, 06:40 pm
Download App from Playstore: