ಸೋಮಾರಿತನ

ಓ..ಓ...ಸೋಮಾರಿತನವೆ
ನೀನೆ ನನ್ನ ಏಳಿಗೆಗೆ ಶಾಪವೆ!


ಗೆದ್ದೇಗೆಲ್ಲುವೆನೆಂದು ಪಣತೊಡುವೆ
ಎಲ್ಲ ತಯಾರಿಯ ಕ್ಷಣದಲ್ಲೆ ಮಾಡುವೆ
ಹತ್ತು ಹೆಜ್ಜೆಯನ್ನಿಡುವೆ ಹುರುಪಿನಲಿ
ಮತ್ತೆ ಮರುದಿನ ಮಲಗುವೆ ಮುಸುಕಿನಲಿ!

ಸೋಲಿನಲು ಸಾಧಿಸಿದವರ
ಚರಿತ್ರೆಯ ಆಲಿಸುವಾಗ
ನಾ ಸೇರಲು ಅಂತಹವರ
ಸಾಲಿಗೆ ಆಸೆ ಚಿಗುರುವುದಾಗ!

ಪ್ರಯತ್ನವಿಲ್ಲದೆ ಫಲ ದೊರಡತೀತೆ
ಅಡಿಮುಂದಿಡದೆ ದಾರಿ ಸಾಗೀತೆ
ಕಲ್ಪನೆಯಿಂದ ಕನಸು ನನಸಾದೀತೆ
ಮಂತ್ರಕ್ಕೆ ಮಾವಿನಕಾಯಿ ಉದುರೀತೆ!

ಎಲ್ಲಬಲ್ಲೆನಾದರು
ಪ್ರಯತ್ನ ಮಾಡೆನು
ಮೂಕ ದೇವರ ಮುಂದೆ
ಕೂತು ವರವ ಬೇಡುವೆನು!




ಶಾರಧ

- ಶಕುಂತಲಾ

06 Sep 2017, 12:20 pm
Download App from Playstore: