ಒಳ್ಳೆಯದಕ್ಕೆ ಇದು ಕಾಲವಲ್ಲ........
ದುರ್ಜನರೆ ತುಂಬಿರುವ ಈ ಪ್ರಪಂಚದಲ್ಲಿ
ಸಜ್ಜನರಿಗಿಲ್ಲಿ........... ಕಾಲವೇ
ಹಣದಿಂದ ಎಲ್ಲವನ್ನು ಅಳೆಯುತ್ತಿರುವಾಗ
ಅನ್ನದಾತನ ಬೆವರಿಗಿಲ್ಲಿ.......ಬೆಲೆಯೇ
ಆಧುನಿಕತೆಯ ಅಮಲಿನಲ್ಲಿ ತೇಲುತ್ತಿರುವಾಗ
ಸಂಸ್ಕೃತಿಗೆ............. ಭಯಪಡುವರೆ
ರಕ್ತ ಸಂಬಂಧವನ್ನ ಬಿಟ್ಟು ತನ್ನ ಸ್ವಾರ್ಥಕ್ಕಾಗಿ
ಬದುಕುತ್ತಿರುವಾಗ. ..
ಮನುಸ್ಯತ್ವಕಿಲ್ಲಿ ........... ಕಾಲವೇ
ನಾಲ್ಕು ಜನ ಬದುಕಲು ಅರಮನೆ ಕಟ್ಟಿಸುವವರಿರುವಾಗ
ಬಡವನ ಗುಡಿಸಲಿಗಿಲ್ಲಿ ...... ಬೆಲೆಯೇ
ಗುಡಿಯಲ್ಲಿ ಇಲ್ಲದ ದೇವರಿಗೆ ಪೂಜೆಗೈದು
ಮನೆಯ ದೇವರುಗಳನ್ನ ಬೀದಿಗೆ ತಳ್ಳುವಾಗ
ಅವರ ಪ್ರೀತಿಗಿಲ್ಲಿ...... ಅರ್ಥವಿದೆಯೇ
ಲಂಚದ ಬಲೆಯಲ್ಲಿ ಪೃತ್ವಿ ಸಿಲುಕಿರುವಾಗ
ಪರಿಶ್ರಮಕಿಲ್ಲಿ........ಫಲವೇ
ಮದ್ಯಪಾನಿಯಗಳ ಹೊಳೆಯಲ್ಲಿ ಈಜುತ್ತಿರುವಾಗ
ಹನಿ ನೀರಿಗಿಲ್ಲಿ......... ಬೆಲೆಕೊಡುವರೆ
ನಿಸರ್ಗವನೆಲ್ಲ ನಾಶಪಡಿಸುತ್ತಿರುವಾಗ
ಪ್ರಾಣಿಪಕ್ಷಿಗಳಿಗಿಲ್ಲಿ..... ನೆಲೆಯೇ
------ಮಂಜು
- ಮಂಜು
07 Sep 2017, 07:17 am
Download App from Playstore: