ಗೌರಿ...

ದಿಟ್ಟೆ ಹೆಣ್ಣು ಗೌರಿ
ಸೇರಿದಳು‌ ಗೋರಿ
ಬೆದರಿಕೆಗೆ ಬಗ್ಗದ ಹೋರಾಟಗಾರ್ತಿ
ಬಂದು ಹೊತ್ತೊಯ್ದಿದೆ ಅವಳ ಸಾವಿನ ಸರತಿ
ಲೇಖನಿಯ ಬರಹ ಖಡ್ಗಕ್ಕಿಂತ ಹರಿತ
ಆ ಬರವಣಿಗೆಯೆ ಕೊಟ್ಟಿತವಳಿಗೆ ಗುಂಡಿನ ಹಿರಿತ

ದುಷ್ಟ ಶಕ್ತಿಗಳ ಕೈ ಮೇಲಾಯಿತು
ಗುಂಡಿನ ಮೊರೆತ ಕೇಳಿಯೆ ಬಿಟ್ಟಿತು
ಸುಳ್ಳು ಮೋಸ ದ್ವೇಷ ಕೆಟ್ಟ ಶಕ್ತಿ ಗೆದ್ದೆ ಬಿಟ್ಟಿತು
ಕಾಣದ ಕೈ ಮೋಸದಾಟ ಆಡಿಯಾಯಿತು‌
ಮುಗ್ಧ ಜೀವ ಸಾವಿನ ಮನೆ ಸೇರಿತು
ನ್ಯಾಯ ನಿಷ್ಠೆ ಹೋರಾಟ ಮಣ್ಣ‌ ಪಾಲಾಯಿತು

ಜನ ಜೀವನಕ್ಕಾಗಿ ಹೋರಾಟ
ಆಯಿತವಳಿಗೆ ಸಾವು ಬದುಕಿನೊಂದಿಗೆ ಆಟ
ನಕ್ಸಲರ ಮನಸನ್ನೆ ಕರಗಿಸಿದವಳು
ಸಮಾಜದೊಳಗೇ ಇರುವ ರಾಕ್ಷಸರನ್ನು ಮರೆತಳು
ಮನುಷ್ಯ ಮುಖದವರು ವ್ಯಾಘ್ರ ರೂಪ ತಾಳಿದರು
ಜೀವಕೆ ಬೆಲೆಯೆ ಇರದೆ ಕಾದು‌ ಇರುಳಲಿ ಕೊಂದರು

ತೆಗೆದರೇನಂತೆ ಜೀವ, ಮಣ್ಣಾದರೇನು ದೇಹ
ನಿಲ್ಲದು ನ್ಯಾಯ ನೀತಿ ಬದುಕಿಗಾಗಿನ ಹೋರಾಟದ ದಾಹ
ಸುಧಾರಕಿ, ಹುಟ್ಟು ಹೋರಾಟಗಾರ್ತಿ, ವಿಚಾರವಾದಿ
ನಿರಂತರ ಸಮಾಜದಲಿ ಸವೆಸಿ ಹೋದರು ಬದುಕಿನ ಹಾದಿ
ಬದುಕಿಗಾಗಿನ ಹೋರಾಟಕೆ ಇಂತವರೇ ಗುರುವಿನ ರೀತಿ
ಈ ಸಾವು, ಉಳಿದವರ ನ್ಯಾಯಕ್ಕಾಗಿ ಹೋರಾಡಬೇಕು ದೂರತಳ್ಳಿ ಭೀತಿ

ಬೇಕಿಲ್ಲ ಹೋರಟದಲ್ಲಿ ಜೀವ ಕಳೆದುಕೊಂಡವರಿಗಾಗಿ ಅಶ್ರುತರ್ಪಣ
ಮಾಡಿಕೊಳ್ಳಬೇಕಾಗಿದೆ ನಮ್ಮನ್ನು ಸಮಾಜ ಸುಧಾರಣೆಗಾಗಿ ಅರ್ಪಣ
ಈ ಸಾವಿನಿಂದಾಗಿ ಹುಟ್ಟಿದರೆ ಹೋರಾಟಕ್ಕಾಗಿ ಒಂದು ಬಣ
ಆಗಲೇ‌ ಆ ಜೀವದ ತ್ಯಾಗಕ್ಕೆ ನಿಜವಾದ ಅರ್ಥ‌ ಸಿಗುವುದೆಂದು ತಿಳಿಯಬೇಕು ನಮ್ಮ ಮನ

- ಶ್ರೀಕಾವ್ಯ

07 Sep 2017, 05:12 pm
Download App from Playstore: