ಪ್ರೀತಿ
ಪ್ರೀತಿ ಅರಳಿರುವ ಹೂವಿನಂತೆ
ಸ್ವಾದ ತುಂಬಿದ ಜೇನಿನಂತೆ!!
ಪ್ರೀತಿ ರಸ ಬಾಳೆಯ ಹಣ್ಣಿನಂತೆ
ಗುಟುಕು ನೀಡುವ ಹಕ್ಕಿಯಂತೆ!!
ಪ್ರೀತಿ ನಿಶ್ಯಬ್ದದ ಆಣತಿಯಂತೆ
ಅಂತರಂಗದ ಭಾವನೆಯಂತೆ!!
ಪ್ರೀತಿ ಸೃಷ್ಟಿಯ ಭಾಗವಂತೆ
ಸೌಂದರ್ಯದ ರಾಶಿಯಂತೆ!!
ಪ್ರೀತಿ ಅಮೃತದ ಬಿಂದುವಂತೆ
ಸಂಜೀವಿನಿ ಮಂತ್ರದಂತೆ!!
ಪ್ರೀತಿ ನಿರಾಕಾರ ರೂಪಿಯಂತೆ
ನಾನಾರ್ಥದ ಭಾವವಂತೆ!!
ಪ್ರೀತಿ ನಮ್ಮೆಲ್ಲರ ಜೀವವಂತೆ
ಜೀವನಕ್ಕೆ ದಾರಿಯಂತೆ!!
ಪ್ರೀತಿ ಪರಮಾತ್ಮನ ಆತ್ಮವಂತೆ
ಆ ಆತ್ಮಕ್ಕೆ ತೋರುವ ಭಕ್ತಿಯಂತೆ!!
- ಪಿ.ಜಿ.ಜ್ಯೋತಿ
07 Sep 2017, 10:03 pm
Download App from Playstore: