ನೋವು

ನೋವುಗಳು ಮೀರಿವೆ ಅವುಗಳ‌ ಎಲ್ಲೆ
ಕಣ್ಣೀರಿಗೆ ಹೇಳಿ ಬಿಡಲೆ‌ ನಾ‌‌ ನಿನ್ನ ಒಲ್ಲೆ
ಅತ್ತಷ್ಟು ನಿಲ್ಲದು ಸುರಿವ ಕಣ್ಣೀರ ಸಾಲು
ಮತ್ತಷ್ಟು ಸೇರುವುದು ನೋವಿಗೇನೆ ಪಾಲು

ಸಾಧ್ಯವೇ ನೋವಲ್ಲಿಯೂ ನಗಲು
ದೂರಾಗುವುದೆ ನೋವಿನ‌ ಅಳಲು
ಕಾಣುವುದೆ ನೆಮ್ಮದಿಯ ಹಗಲು‌
ಕಳೆಯಲಾಗುವುದೆ‌ ಕಣ್ಣೀರಿಲ್ಲದೆ ಇರುಳು‌

ನಿಂತಲ್ಲೂ‌ ಕುಂತಲ್ಲೂ ಕಣ್ಣೀರದೆ ಧ್ಯಾನ
ಮನಸ ಅಪ್ಪಿ‌ ನಿಂತಿದೆ ಎಡಬಿಡದೆ ಮೌನ

- ಶ್ರೀಕಾವ್ಯ

08 Sep 2017, 02:55 pm
Download App from Playstore: