ಅಮರಳಾದಳು ಗೌರಿ
ಅಮ್ಮ ಈ ನಿನ್ನ ಕರುಳಕುಡಿ
ಇಡೀ ಜೀವನವೆ ನಿನಗಾಗಿ ಮುಡಿ
ಸಂಸಾರ ತ್ಯಜಿಸಿದ ತ್ಯಾಗಮಯಿ
ಜೀವನದುದ್ದಕ್ಕು ಉಂಡದ್ದು ಬಲು ಕಹಿ!
ಪಿತೃ - ವಾತ್ಸಲ್ಯವು ಸೆಳೆಯಲು
ಸಮಾಜ ಸೇವೆಯ ಕಡೆಗೆ
ದಿಟ್ಟತನದಿ ಉಳಿಯಲು
ಅನಂತಚಕ್ರದಿಂದ ಹೊರಗೆ!
ನಿನ್ನ ಬೆನ್ನೆಲುಬಾಗಿ ನಿಂತವಳು
ಈ ಹೆಮ್ಮೆಯ ನಾರಿ
ಎಡ-ಬಲ ಪಂತಗಳ ಎಡಮುರಿಕಟ್ಟಿದಳು
ಸೈರಿಸದೆ ತೋರಿದರು ಸಾವಿನ ದಾರಿ!
ಕೆಟ್ಟಕುಳಗಳ ಹುಟ್ಟಡಗಿಸಲಾಗಲಿಲ್ಲ
ದಿಟ್ಟ ಮಹಿಳೆಯ ಉಳಿಸಿಕೊಳ್ಳಲಾಗಲಿಲ್ಲ
ನ್ಯಾಯಕ್ಕೆ ಸೆಡ್ಡುಹೊಡೆದಿಹರು ಭ್ರಷ್ಟರೆಲ್ಲ ದಂಡಿಸುವಷ್ಟರಲ್ಲಿ ಎಲ್ಲ ಇಹಲೋಕತೊರೆವರಲ್ಲ!
ಯಾರದೋ ಸೇಡು ,ಯಾವುದೋ ಜಾಡು
ನಿನ್ನ ಮಕ್ಕಳ ರಕ್ಷಣೆಗಾಗಿ ಸವಿಸಿದಳು ಜೋಡು
ಅವಳು ಸೇರಲಾಗಲಿಲ್ಲ ಇರುಳಲ್ಲಿ ತನ್ನ ಗೂಡು
ಜರೂರಿನಲ್ಲಿ ಗುಂಡಿಟ್ಟವನು ದೌಡು!
ರಕ್ತದ ಮಡುವಿನಲ್ಲಿ ಮಿಂದೆದ್ದಳು
ನೇತ್ರಗಳ ನಿನ್ನಲ್ಲೆ ಬಿಟ್ಟೋದಳು
ಬಲಿದಾನದಲ್ಲೆ ಬಲಿಯಾದಳು
ನಯನದಿಂದ ಎಂದೆಂದು ನಮ್ಮ ನೋಡುವಳು!
ಅಮ್ಮ ಕನ್ನಡಾಂಬೆ ನಿನಗಾಗಿ
ತನ್ನ ಉಸಿರ ನೀಡಿದ ತ್ಯಾಗಿ
ಅಮರಳಾದಳು ನಮ್ಮಮ್ಮ ಗೌರಿ
ದುಷ್ಡರ ಪಾಲಿಗೆ ನೀನಾಗು ಮಾರಿ!
ಜೈ ಭಾರತಾಂಬೆ!
ಜೈ ಕನ್ನಡಾಂಬೆ!
ಶಾರಧ
- ಶಕುಂತಲಾ
08 Sep 2017, 05:43 pm
Download App from Playstore: