ಭಗ್ನ ಪ್ರೇಮಿ...
ಒಲುಮೆ ತುಂಬಿದ ಕಂಗಳಲಿ
ಕನಸಿನ ಕವಿತೆಯನು
ಹೃದಯದಲಿ ಕೆತ್ತಿಸಿ
ಭಗ್ನ ಪ್ರೇಮಿಯಂತೆ
ನಿನಗಾಗಿ ಕಾದಿರುವೆನು!
ಪ್ರೀತಿ ಎಂಬ ಸಾಗರದಲಿ
ನಿನ್ನ ನೆನಪಿನ ದೋಣಿಯಲಿ
ಮುಳುಗಿಯೂ ತೇಲಲಾಗದ
ನಡುವಿನ ಪ್ರೀತಿಯಲಿ
ನೀ ಬಂದೆ ಬರುವೆ ಎನ್ನುವ
ನಿರೀಕ್ಷೆಯ ಜೊತೆಯಲ್ಲಿ
ಸಾಗುತ್ತಿದೆ ನನ್ನೀ ಪಯಣ!
ನೆನಪಿನಂಗಳದ ಈ ಪಯಣದಲಿ
ಮುಗ್ದ ಮನಸಿನ ಸಾಹಿತಿಯಾಗಿ
ನಾ ಕಾಣದ ಹಾದಿಯಲ್ಲಿ
ಕಾಣಸಿಗದ ನಿನ್ನಯ
ಹೆಜ್ಜೆಗುರುತನು
ಅರಸಿ ಬಂದಿರುವೆನು
ಸಿಗುವೆಯಾ?
- ಪ್ರಿಯಾಂಕ
09 Sep 2017, 07:37 pm
Download App from Playstore: