ಮಾಯೆ
ಮರೆತೆನೆಂದರು ಮರೆಯದು ಈ ಮಾಯೆ
ಎದೆಯ ಗೂಡಲಿ ನೀಬಿಟ್ಟು ಹೋದ
ನೆನಪುಗಳ ಛಾಯೆ
ಹೃದಯ ಅಂಚಿಪೆಟ್ಟಿಗೆಗೆ
ಕಳಿಸಿರುವೆ ಒಲವಿನ ಓಲೆ
ಪ್ರೀತಿಯ ಹಣತೆ ಹಚ್ಚಲು
ನೀಡುವೆಯಾ ಸವಿ ಒಪ್ಪಿಗೆ
ಆರಾಧನೆ ಆರೈಕೆಯಲು ನಿನ್ನ
ಮಧುರ ಪ್ರೀತಿಯೆ ಹಿತ ನನಗೆ
ಬರಡಾದ ಬದುಕಿಗೆ ಬಣ್ಣ ತುಂಬಿಸಲು
ಬಾ ನೀನು ಕಾಮನಬಿಲ್ಲಿನ ಹಾಗೆ
ನಾನೇ ನೀನಾಗಿರುವಾಗ ಎದೆಯಾಳದಲಿ
ಹೊಮ್ಮಲಿ ಒಲವ ಭಾವಗೀತೆ
ಮನದ ರಥದಲ್ಲಿ ಕೂತು ಸದ್ದಿಲ್ಲದೇ
ಸಾಗಲಿ ಒಲವ ಮೆರವಣಿಗೆ
*ಮಾನಸಾ ಎಪಿ..*
- ಮಾನಸಾ ಎಪಿ
10 Sep 2017, 05:51 am
Download App from Playstore: