ನಮಗ್ಯಾಕೆ....?
ಹೂ ಕುಂಡದಿ ಬಂದಿಸದಿರು
ನನ್ನ,ಧರೆಯ ತಾಗಲು ಬಿಡು
ನಾ ನೆಟ್ಟರೆ ಎಲ್ಲ ಫಲ ಪಡೆವರು
ಸುಮ್ಮನಿರು ಸೌಖ್ಯದಿ ನಮಗ್ಯಾಕೆ ?
ನೀ ನನಗಾಗಿ ವಹಿಸುವೆ ಶ್ರಮ
ಅದರಿಂದ ಆಗುವುದೆಲ್ಲ ವ್ಯಯ
ನೀನು,ನನ್ನ ಘನತೆಯ ಆಯಾಮ
ಪರರ ಗೋಜು,ನಮಗ್ಯಾಕೆ ?
ನಿನ್ನ ಘನತೆ ನೀಡುವುದೆ ನಿನಗೆ
ಅನ್ನ,ನೀರು, ನಿನ್ನ ದೇಹಕ್ಕೆ ಉಸಿರು
ಇರುವವಲ್ಲ ಬೀದಿಗೊಂದು ಸಂಘ
ಬಾಚುವವರವರು ಮಾಡಲಿ,ನಮಗ್ಯಾಕೆ?
ನೆಪವ ಬಿಡು ನೀಡು ನನಗೆ ಮರುಜೀವ
ನೀಗಿಸಿಕೊ ನಿಮ್ಮೆಲ್ಲರ ಅಭಾವ
ಒಬ್ಬಂಟಿಗ ನಾನು ,ಸಾಧ್ಯವಾದೀತೇನು
ಎಲ್ಲರು ನಮಗ್ಯಾಕೆ ಎನ್ನುತ
ದೂರ ನಿಲ್ಲುವರಲ್ಲವೇನು?
ನಮಗ್ಯಾಕೆ ಎನ್ನುವರೆ ನೀವೆಲ್ಲ
ನಾ ಬೆಳೆದು ನಿಂತಾಗ ಅನುಭವಿಸುವಿರಲ್ಲ
ನೀವು ಬೆಳೆಸುವ ಘನತೆಯ ಕುಂಡ
ನಿಮಗೆ ನೀಡೀತೆ ಮಳೆ, ಇಳೆಗೆ ತಂಪು
ಉಳಿಯಲಾರೆನು ನಾನು ನಿಮ್ಮಂತೆಯೆ
ಸ್ವಾರ್ಥದಿ ನನಗ್ಯಾಕೆ ಎಂದು?
ಶಾರಧ
- ಶಕುಂತಲಾ
11 Sep 2017, 02:46 pm
Download App from Playstore: