ಸೋಲಿನ ಪ್ರೀತಿ.....

ಸಾಗುತ್ತಿದೆ ನನ್ನೀ ಪಯಣ
ಯಾರ ಅರಿವಿಗೂ ನಿಲುಕದಂತೆ.

ಬೀಸುವ ತಂಗಾಳಿಯಲ್ಲಿ
ತೇಲಿಹೋಗಿವೆ
ನನ್ನೆಲ್ಲಾ ಕನಸುಗಳು..
ಸಮುದ್ರದ ಸುಳಿಯಲ್ಲಿ
ಸಿಲುಕಿಗೊಂಡಿಹ ಕಣ್ಣೀರುಗಳು
ಸಹಾಯಹಸ್ತವ ಬೇಡುತ್ತಿವೆ!

ಯಾವುದೋ ಕಾಣದ ಹಸ್ತಗಳು
ಹಿಂಬಾಲಿಸಿ ನಗುತ್ತಿರಲು
ಒಬ್ಬಂಟಿಯಾಗಿ
ಅವಿತು ಕುಳಿತಿರುವೆನು
ನೀರವ ಮೌನದಲಿ!

ಮೌನವ ಭೇಧಿಸಿ
ಹೊತ್ತೊಯ್ಯುತ್ತಿದ್ದಾರೆ
ಜೊತೆಯಾಗಿ ಸಾಗಲು
ಯಾರು ಸುಳಿಯರು ನನ್ನೊಂದಿಗೆ
ಏಕಾಂಗಿಯಾಗಿ ಸಾಗಿರುವೆನು
ಮರಳಿ ಬಾರದ ಲೋಕಕೆ!

- ಪ್ರಿಯಾಂಕ

11 Sep 2017, 09:45 pm
Download App from Playstore: