ನಿನ್ನ ಚಂದಕೆ ಸಾಲಗಾರ

ಮೀನೋಗೋನಿ ಮಿನೊಗೋ ಬಾಲೆ
ಮಿನೊಗೋನಿ ಮಿಂಚಿನ ತಾರೇ
ಅಂದದಾ ಅರಮನೆಯಲ್ಲಿ
ನಿನ್ನ ಈ ಚೆಂದ್ದಕೆ ಸಾಲಗಾರನಾಗಲೇ

ವಸಿಬಿಡಿಸಿ ಹೇಳಲೇ ಈಗ್ಲೆ
ನನ್ನ ಮನದಾ ಮಾತಿನಮಳಿಗೆ
ನಾ ಕಾಣೋ ಕನಸಿನ ಕನ್ಯೆ
ನೀನೇಕೆ ಕಾಡುವೆ....

ಮೀನೋಗೋನಿ ಮಿನೊಗೋ ಬಾಲೆ
ಮಿನೊಗೋನಿ ಮಿಂಚಿನ ತಾರೇ

ನಾ ಕಾಣದಾ ಕನಸೊಂದನ್ನ
ಇವಳಿಂದ ನಾನು ಕಂಡೆ
ನಾ ಬರೆಯಲೇ ನಿನ ಹೆಸರನೆ
ನನ್ನ ಮನದ ಬಾಗಿಲಿಗೆ
ಬಂದತಿದೆ ಬರವಣಿಗೆ
ಬರೆಯುವುದು ಕಲಿಸೆ ಏನಗೆ
ನಿ ಬಂದುಹೋದಾ ಗಳಿಗೆ
ಹೀಗೇಕೆ ಕಾಡಿದೆ ಮನಸೇ
ಮತ್ತೇನು ಮಾಡದ ಮರತೆ
ಯಾಕಿಂಗೆ ಆಗಿದೆ ನನಗೆ
ನಿನ್ನ ಬಂದಮೇಲೆ....?

ಮೀನೋಗೋನಿ ಮಿನೊಗೋ ಬಾಲೆ
ಮಿನೊಗೋನಿ ಮಿಂಚಿನ ತಾರೇ
ಅಂದದಾ ಅರಮನೆಯಲ್ಲಿ
ಚೆಂದ್ದಕೆ ಸಾಲಗಾರನಾಗಲೇ...

ಮಳೆಹನಿಯ ಮೆರವಣಿಗೆಯಾ
ಪಲ್ಲಕ್ಕಿಯ ಕುರಿಸಲು ಏನಗಾಸೆ
ಇವಳಾಡುವ ಮಾತಲ್ಲಿ ನಾ
ಮುನ್ನುಡಿಯಲು ನಾ ಇರಲು
ಸತ್ತೋದ ಸಂದಾನಕು
ನಿನಾದೆ ಸೇತುವೆಯ ಬಂದನವು
ಮನದಲಿ ಮೂಡಿದ ಮೊಗಕೆ
ಬೊಗಸೆಯಲ್ಲಿ ಹಿಡಿದು ಚುಂಬಿಸಲೇ...
ಎದ್ದು ಬಿಡಲೇ ನಾ ಈಗಾ
ನಿನ ಕಲ್ಪನೆಯ ಆಚೆ.


ಮೀನೋಗೋನಿ ಮಿನೊಗೋ ಬಾಲೆ
ಮಿನೊಗೋನಿ ಮಿಂಚಿನ ತಾರೇ
ಅಂದದಾ ಅರಮನೆಯಲ್ಲಿ
ಚೆಂದ್ದಕೆ ಚಂದಾದಾರನಾಗಲೇ

ಕಲ್ಪನೆಯ ಪಯಣಿಗ
✍✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

12 Sep 2017, 02:52 pm
Download App from Playstore: