ಬಿಸಿ..... ತಂಗಾಳಿ!

ಬಿಸುತ್ತಿದೆ ತಂಗಾಳಿ ಜ್ಞಾಪಿಸಲೆಂದೆ ಅವಳ......
ತಂಪು ತಂಗಾಳಿಯು......ಇಂದು ನನಗೆ
ನೀಡುತ್ತಿದೆ ಬಿಸಿಯ....... ಅನುಭವ
ಅವಳಿಲ್ಲವೆಂದೇನೋ............

ನೀ.... ಹೊತ್ತು ತರಬಾರದೇಕೆ ಅಂದಿನ
ಸವಿ ನೆನಪುಗಳ.........
ಅವಳಿಲ್ಲದ ಈ ಘಳಿಗೆಯಲ್ಲಿ...........
ಅವಳಮರೆವಿನಂಚಿನ ಕ್ಷಣದಲ್ಲಿ.........

ಹೋದಳೊಂದುದಿನ ನನ್ನಿಂದ ದೂರ
ಹಿಂತಿರುಗಿ ನೋಡದಂತೆ ಒಂದು ಬಾರಿಯೂ
ಮರುಕ ಪಡದಂತೆ.........
ಅಂದವಳು ಕೊನೆಯ ಸಾರಿ.........

ಗುಬ್ಬಿಯಂತಿದ್ದ ಅವಳು ಗಿಡುಗನಂತದಳು
ನನ್ನ ಜೀವನದಲ್ಲಿ ನಾ ....ಏನತಪ್ಪು ಮಾಡಿದೆನೆಂದೋ............
ನನ್ನ ಹೃದಯವ.......... ಗಾಯಗೊಳಿಸಿ

ಒಂದು ಪ್ರೀತಿಯ ತೊರೆದು ಇನ್ನೊಂದು
ಪ್ರೀತಿಗಾಗಿ...... ಹಂಬಲಿಸುತ್ತ
ಮಾತುಪಿತ್ರರ...... ಮಾತು ಪಾಲಿಸಲಿಕ್ಕಾಗಿ
ಅವರ ಗೌರವಕ್ಕೆ ......ದಕ್ಕೆಪಡಿಸದ
ಕಾರಣಕ್ಕಾಗಿ...............




ಮಂಜು.

- ಮಂಜು

12 Sep 2017, 06:43 pm
Download App from Playstore: