ಯೌವನ

ಒಲವು ಗೆಲುವಿನ ಸಾಗರದಲಿ ತೆಲತಾ
ನಯನಗಳು ಒಂದನ್ನೊಂದು ಕೂಡತಾ
ಮನಸಿನ ಮೂಲಕವೇ ಮಾತಾಡತಾ
ಎದೆಗೂಡಿನ ಹಾಡು ಆಲಿಸುತಾ
ಪ್ರೇಮ ಪ್ರಪಂಚದಲಿ ತೆಲಾಡತಾ
ಕನಸಿನಲ್ಲಿ ಕಲ್ಪನೆಯ ಕೆತ್ತುತಾ
ಭಾವನೆಗಳಿಗೆ ಪುಷ್ಟಿ ನೀಡತಾ
ಮೌನದಲ್ಲೆ ಮಗ್ನವಾಗತಾ
ವಿರಹಗಳಿಗೆ ವೇದನೆ ಪಡುತಾ
ಅರೆ ಪ್ರಜ್ಞಾವ್ಯವಸ್ಥೆಯಲ್ಲಿರುತಾ
ತನುವಿಗೆ ಶಿಕ್ಷೆ ಕೊಡತಾ
ಕಣ್ಣಾಮುಚ್ಚಾಲೇ ಆಡತಾ
ಭಯ ಅಭಯ ಒಡಮೂಡಿಸಿಕೊಳ್ಳತಾ
ಸಂಶಯ ಸಲ್ಲಾಪದಲಿ ಕಾಲುಜಾರುತಾ
ಸಂಯಮ ತಾಳ್ಮೆ ಕಳೆದುಕೊಳ್ಳತಾ
ಮೋಹ ಮಾಯೆಗೆ ಬೀಳತಾ
ಆಲಸ್ಯತನದಿಂದಿರುತಾ
ಸ್ವಾರ್ಥತೆ ಮೈಗೂಡಿಸಿಕೊಳ್ಳುತಾ
ಹೊಸ ಹೊಸ ಅನುಭವ ಪಡೆಯುತಾ
ಕಿಶೋರ್ ಪಾಠ ಕಲೆಯುತಾ
ಬೇಕು ಬೇಡಗಳನ್ನು ಎದುರಿಸುತಾ
ಸ್ವಾಭಿಮಾನ ಬೆಳಸಿಕೊಳ್ಳುತಾ
ಸ್ವತಂತ್ರತೆಯಿಂದಿರಲು ಪ್ರಯತ್ನಿಸುತಾ
ತಪ್ಪು ಒಪ್ಪುಗಳಿಗೆ ಹಿರೇಉಳ್ಳಿಗೇರಿ ಕರೆಮ್ಮಳನ್ನು ನೆನೆಯುತಾ
ಗುರಿಕಡೆ ಸಾಗುವುದೇ ಯೌವನ

- MB

14 Sep 2017, 09:22 pm
Download App from Playstore: