ನನ್ನೊಳಗಿನ ಕವಿ
ಮುಂಜಾನೆಯ ಎಳೆಬಿಸಿಲ ಕಾಣುತ
ಕಣ್ಣ ತಂಪಾಗಿಸಿಕೊಂಡ ಮನದಲಿ,
ಹಕ್ಕಿಗಳಿಂಚರ, ಕೋಗಿಲೆಯ ಕುಹುಗಾನ
ಕಿವಿಯ ಇಂಪಾಗಿಸಿಕೊಂಡ ಕ್ಷಣದಲಿ,
ನನ್ನೊಳಗಿನ ಕವಿ ಎಚ್ಚೆತ್ತು ಕುಳಿತ..
ಕೆರೆಯ ನೀರಲಿ ತೇಲುತೇಲುತ, ಸೂರ್ಯರಶ್ಮಿಯ ದಾರಿ ಕಾಯುತ ಬಿರಿಯುತಿಹ ತಾವರೆಗೆ ಸೋತು
ದಳದಳದ ಇಬ್ಬನಿಯ ಕಣ್ಣಿಗಾತು ನನ್ನೊಳಗಿನ ಕವಿ ಇಹವ ಮರೆತ..
ನೊಗಕೆ ಕಟ್ಟಿಹ ಜೋಡಿ ಎತ್ತಿನ..
ನಡೆಗೆ ತಕ್ಕ ಹಾಡ ಹಾಡುತ..
ತನ್ನ ಸವೆಸುತ ಅನ್ನ ನೀಡುತ
ಸಾಲ ಶೂಲದಿ ಬೇವ ರೈತಗೆ
ನನ್ನೊಳಗಿನ ಕವಿ ಸಲಾಮು ಹೊಡೆದ..
- shwethaArun
16 Sep 2017, 01:25 pm
Download App from Playstore: