ಕಣ್ಣುಗಳೇ ಕೂಡಿಟ್ಟಿರಿ

ಕಣ್ಣುಗಳೇ ಕೂಡಿಟ್ಟಿರಿ ನಿದ್ದೆಗೆಟ್ಟು
ನಾ ಕಳೆದುಕೊಂಡ ಕನಸುಗಳನ್ನು...........

ಕಂಬನಿಯ ಕೊಳದಲ್ಲಿ ಮುಳುಗೆದ್ದು ಒದ್ದೆಯಾಗಿರುವೆವು ನೀ ಕಂಡ ಕನಸುಗಳ
ಬಣ್ಣಗಳು ಕಣ್ಮರೆಯಾಗಿ ನಿನ್ನ ಮೌನದಂತೆ
ಶೂನ್ಯವಾಗಿ ಉಳಿದಿವೆಯೆಂದು ಮಾತ್ರ ಹೇಳದಿರಿ........

ಹೃದಯದಲ್ಲಿ ಕರಗಿರುವ ನೋವು
ಅಳುಕಿನ ಛಾಯೆಯಲಿ ಸಂಚು ಹೂಡಿ
ನನ್ನಲ್ಲೆ ಉಳಿದಂತಹ ಗತಕಾಲದ
ಗುರುತುಗಳ ಸುಳಿವು ಕರೆಯಿಲ್ಲದೆ ನನ್ನಿಂದ ದೂರವಾಗುವಂತೆ ನೋಡಿ ನಾಯನಗಳೇ........

- ಚುಕ್ಕಿ

16 Sep 2017, 08:27 pm
Download App from Playstore: