ಬೇಗನೆ ಬಾ
*ಕವನ*
*_ಬೇಗ ಬಾ ನೀನು_*
_ಬೇಗ ಬಾ ನೀನು ನನ್ನ ಸನಿಹ
ಅಳಿಸು ಬಾ ನೀನು ನನ್ನ ವಿರಹ
ನೋವಿಸದಿರು ಬಿಗಿದಿಡು ನನ್ನ ಆದರ
ಕೊನೆಗೊಂಡಿತೇ ನಿನ್ನಯ ಮಿಲನ_
ಪಿಸು ಮಾತಾಡುತ ತುಸು ದೂರ ನಡಿಯೋಣಾ
ಕಿಳಿಸಂಜೆಯ ತಂಗಾಳಲಿ ಜೊತೆಯಾಗೋಣಾ
ಕುಸುಮ ಹೀರುತ ಅರಳುವ
ಬಲಿ ಮೆರೆಯೋಣಾ
ಸವಿ ಹೀರಲು ಹಕ್ಕಿಗಳ ಜೊತೆ
ಒಲವ ತಿಳಿಸೊಣಾ
ನೂತನ ಸ್ನೇಹವಿದು ಮಾತಿಗೂ ಸಿಗದು
ಮೊಗ್ಗಾದ ಮೋಹವಿದು ನೀ ಬರದೆ ಅರಳದು
ಬಾಳಿಗಿರುವ ಅರ್ಥವ ಸುರಿಸಿ
ಅರ್ತಿಮೂಡಿಸಿದೆ
ನಿನ್ನದೇ ದ್ಯಾನದಲಿ ಕೊನೆಗೂ
ನಾ ಬೆರಗಾದೆ...
ಎದೆಯ ಪುಸ್ತಕವ ತೆರೆದು ನೀ ಓದಬೇಕಿದೆ
ಕನಸುಗಳು ಕೂಡಿಡಲು ನಿನ್ನಲಿ ಜಾಗ ಬೇಕಿದೆ
ನೇತ್ರವ ಮುಚ್ಚಿಸದೇ ಪ್ರತಿಕ್ಷನವೂ ನೀ
ಇರಬೇಕಿದೆ
ಸೋದರೀ ನೀನಿಲ್ಲಿ ಬರಬೇಕಾಗುತ್ತದೆ
ನನ್ನಯ ಪ್ರಣಯ ಅರಿಯಬೇಕಿದೆ...
- ಶಾಫಿ
16 Sep 2017, 11:16 pm
Download App from Playstore: