ವಿರಹಾಗ್ನಿ

ಗಂಟೆ ನಾಲ್ಕು ಮೀರಿ, ಸಂಜೆಗೆಂಪೇರಿದೆ
ಇನಿಯನಂತರಾಳದಲಿ ಮಿಂದೇಳುವ ಮನಸಿದೆ
ಸುಳಿವು ಕಾಣದಾಗಿ
ನನ್ನೆದೆಯೇ ಭಾರವಾಗಿ
ನಲಿವದು ನಲುಗಿದೆ
ಬಾ ಬಾರೋ ಇನಿಯನೆ...

ನಿನ್ನೊಲವ ನೆನೆದು ಕೆನ್ನೆ ಕೆಂಪೇರಿದೆ
ಈ ಚಲುವ ಹೀರಲು ರವಿಕಿರಣ ಸೋತಿದೆ
ಕಾದಿಹಳು ನಿನ್ನರಸಿ
ಕುಡಿನೋಟವರಳಿಸಿ
ಬಂದೊಮ್ಮೆ ತಬ್ಬಬಾರದೇ
ಬಾ ಬಾರೋ ಇನಿಯನೆ..

ವಿರಹದಾ ಬೇಗೆಯು ಬೆನ್ನೇರಿದೆ
ಕಣ್ಣಲಿ-ಕಣ್ಣಿಡುವ ಆಸೆಯಾಗಿದೆ
ಏಕಾಂಗಿ ಧ್ಯಾನದಲಿ
ಕಪ್ಪು ಕೋಣೆಯಂಚಿನಲಿ
ಹೊಸ ಭಾವಲೀಲೆ ಕುಡಿಯೊಡೆದಿದೆ
ಬಾ ಬಾರೋ ಇನಿಯನೆ..

ಸವಿಯಲಾಗದ್ದ ಸವಿನೆನಪು ಕಾದಿದೆ
ನೀ ಕೊಟ್ಟ ಉಡುಗೆಯಲಿ ಹೊಸ ಮಿಂಚು ಮಿಂಚಿದೆ
ಈ ಮಿಡಿತ
ಈ ಸೆಳೆತ
ಈ ಮನವಿಗೆ
ತಂಪೆರೆಯಬಾರದೇ
ಬಾ ಬಾರೋ ಇನಿಯನೆ...

*ಭೀಮೇಶ್. ಎಪ್. ಡಿ*

- ಪ್ರೇಮಪುತ್ರ...ಭೀಮೇಶ್

17 Sep 2017, 10:10 pm
Download App from Playstore: