ಅರಳು ಮಲ್ಲಿಗೆ, ಹೊಂಟೆ ಎಲ್ಲಿಗೆ ?
ಅರಳು ಮಲ್ಲಿಗೆ
ನೀ ಹೊರಟೆ ಎಲ್ಲಿಗೆ ?
ಘಮವು ಚೆಲ್ಲಿದೆ,
ಮಾತಾಡು ಮೆಲ್ಲಗೆ.
ಕಪ್ಪು ಹೊದ್ದಂತೆ ಹರಡಿದ ತಲೆ ಕೂದಲ
ಮೋಡ ರಾಶಿಯನ್ನು ಬಾಚಿ
ನೀಳ ಜಡೆಯನು ಹೆಣೆದು
ತುದಿಗೆ ರಬ್ಬರು ಬಿಗಿದು,
ಹಚ್ಚಿರುವೆಯೇನೋ ಕಣ್ಗಪ್ಪು
ಕೊಂಚವೇ ತೀಡಿ ಹುಬ್ಬು.
ಮಾತಿನ ಮಲ್ಲಿಗೆ
ಕಿರು ಆಭರಣಗಳ ಪೋಷಾಕು
ಕಿವಿಯಲಿ ಅಲುಗಾಡುವ ಲೋಲಾಕು.
ಬಂಗಾರದ ಕತ್ತಿನ ಚಿತ್ತಾರದ ರವಿಕೆ
ಬೆನ್ನು ಬಿಗಿದ ಕಿರು ದಾರಗಳ ಕುಣಿಕೆ
ಕುರಿಂಜಿ ಹೂಗಳ ಜಲಪಾತ
ಸುರಿದಂತೆ ರೇಷ್ಮೆ ಸೀರೆ ನೆರಿಗೆ
ಒಪ್ಪ ಓರಣಗೊಂಡ ಮುಗ್ದ ಮೊಗ
ಮುಡಿದ ಮಲ್ಲಿಗೆಯ ಜೊತೆಗೇ
ಹರಡಿದೆ ಮುಗುಳು ನಗೆ.
ಹೊರಟಿರುವೆ ಎಲ್ಲಿಗೆ ?
ಓ ಅರಳು ಮಲ್ಲಿಗೆ.
- ಶ್ರೀಗೋ.
19 Sep 2017, 03:01 pm
Download App from Playstore: