ನೀತಿ ಮಾರ್ಗ

ಬಲ್ಲವರೇ ಬಲ್ಲರು ಬೆಲ್ಲದ ರುಚಿಯ
ನಾನೇನು ಬಲ್ಲೆ ಸಿಹಿ ಕಹಿಯಾ
ತಿಂದರೆ ಕರಾರಾಗಿ ಹೇಳುವೆನಯ್ಯ

ತಿನ್ನದೆ ಕೆತ್ತಿರುವೆ ಸಿಹಿ ಕಲ್ಪಿಕೆಯ
ಅನುಭವಿಸಿರುವೆ ವಾಸನೆ ಸವಿಯ
ಆದ್ರೂ ರುಚಿಸಲಾಗಲಿಲ್ಲ ನೋಡಯ್ಯ

ದೂರದ ಬೆಟ್ಟ ಚಂದಯ್ಯ
ಅದರ ತುಂಬ ಮುಳ್ಳಯ್ಯ
ಕಹಿಯೇ ಇದರ ತಾತ್ಪರ್ಯವಯ್ಯ

ಹೇಳಲು ಕೇಳಲು ಹಿತಯ್ಯ
ನೋಡಲು ಮಾಡಲು ಕಷ್ಟಯ್ಯ
ಇದಕ್ಕೆ ನೀತಿ ನಿಯಮ ಕನಯ್ಯ

ಮೋಹ ಪ್ರಕೃತಿ ಸಹಜವಯ್ಯ
ಭೋಗ ಯೋಗವಯ್ಯ
ಯೋಗ ಉಂಡವರೆ ದೊಡ್ಡವರಯ್ಯ

ಪ್ರಾರ್ಥನೆ ಭಕ್ತಿ ನೆಮ್ಮದಿದಾಯಕವಯ್ಯ
ಅದರ ದಾರಿಯೇ ಮುಕ್ತಿದಾಯಕವಯ್ಯ
ನಮ್ಮ ಹಿರೇಉಳ್ಳಿಗೇರಿ ಕರೆಮ್ಮಳ ಭಕ್ತರು ಇದನ್ನು ತಿಳಿದಿರಲಯ್ಯ

- MB

21 Sep 2017, 08:13 pm
Download App from Playstore: