ಸೈನಿಕ

ಹಗಲು ರಾತ್ರಿಗಳು
ದೇಶದ ಪ್ರೀತಿಗೆ..
ಮನಸು ಮುರಿಯುವುದು
ವೈರಿಗಳ ಅಟ್ಟಹಾಸಕೆ!

ಬಿಸಿಲು-ಮಳೆ, ಚಳಿ-ಗಾಳಿಯಲ್ಲೂ
ವೀರಯೋಧರ ಸೆಣಸಾಟ..
ಸಾವಲ್ಲೂ ನೋವಲ್ಲೂ
ಎಚ್ಚರ ತಪ್ಪದ ಹೋರಾಟ!

ಪ್ರತಿ ದೇಹದ ಉಸಿರಿನಲ್ಲಿ
ಬೆರೆತುಹೋಗಿದೆ ಕನ್ನಡಭಿಮಾನ..
ದುಷ್ಟ ವೈರಿಗಳ ಮೋಸದಿಂದ
ಮಣ್ಣಾದ ಹೆಮ್ಮೆಯ ಕನ್ನಡಿಗ!

ಪ್ರತಿ ಜೀವದ ಎದೆಬಡಿತ
ದೇಶದ ಮೇಲಿನ ಅಭಿಮಾನ..
ದೇಶ ಕಾಯೋ ಸೈನಿಕ
ನಿಮಗಿದೋ ನಮ್ಮ ನಮನ!

ಪ್ರಿಯಾಂಕ✍.

- ಪ್ರಿಯಾಂಕ

22 Sep 2017, 07:13 pm
Download App from Playstore: