ಹಕ್ಕಿಧರ್ಮ
ಹಕ್ಕಿ ಧರ್ಮ
---------------
ಕಾಣದ ಕಣ್ಣಿನ ಆಳದಲ್ಲಿ ಮಿನುಗುವ ನಕ್ಷತ್ರವು
ಹೂಮಾಲೆಯಾಗಿ ಕೊರಳೊಳು ಮಿನುಗಲು
ನೆನಪಾಯಿತು ನನಗೆ ಸಾವಿರ ಸ್ತಂಬಗಳ ಕಂಬಸಾಲು
ಅದು ಧ್ವನಿ ಪೂರ್ಣ ಕವಿತೆಯ ತಾಜಾ ಬಾಬತ್ತು.
ಮಲಗಿದ ಕಣ್ಣುಗಳು ಏನನ್ನೋ ಕಾಣುತ್ತಲಿದ್ದವು
ಹೃದಯ ಇನ್ನೇನನ್ನೋ ಬಡಬಡಿಸುತ್ತಲಿತ್ತು
ಸಾವಿರಾರು ಮೈಲಿ ಸಾಗಿ ಬಂದ ಮನಸ್ಸು
ಭಾವೋದ್ವೇಗದ ಬುದ್ಧಿ ನೆನೆಪಿಸಿಕೊಂಡ ಹಾಡು.
ಸಾವಿರ ಹೃದಯಗಳ ಅರಮನೆಯಲ್ಲಿ ಅರಳಿ
ಜನರ ಮಾತಾಗಿತ್ತು ಸಂತೆ ನಡುಬೀದಿಯಲ್ಲಿ
ಇಬ್ಬನಿಯಂತೆ ಜೀವ ಸಾರ್ಥಕತೆಯನ್ನು ಸಾರಿ
ಬಿದ್ದ ಮಳೆಯಂತೆ ತನ್ನ ಕಾರ್ಯವನ್ನು ನೀಗಿ
ಧನ್ಯತೆಯ ಭಾವದಲ್ಲಿ ನಿರಾಳ ಆಸ್ವಾದನೆ
ನನ್ನ ಅನಾಹತ ಚಕ್ರದ ಧ್ವನಿ ನನಗೆ ಕೇಳಿದಂತೆ
ಪದೋನ್ಮತ್ತ ಸುವಿಶಾಲ ಆಳ ಸಾಗರದಂತೆ
ಕನಸಲ್ಲಿ ಬರೆದಂತೆ ಕವಿತೆಯೊಂದ ಕನವರಿಸಿದೆ.
ಅಂದು ಮುಂಜಾನೆಯ ವೇಗ
ತಡವಾಯಿತೇನೋ ಎಂದೆ,ಎದ್ದು ಬೇಗ
ಅಸತ್ಯ ರಾತ್ರಿಯ ಕಾವ್ಯನಶೆಯ ಮೆಲುಕು ತಳುಕುಹಾಕುತ್ತಲಿತ್ತು .ಮನ ಸುಮ್ಮನೆ ಹಾಡುತ್ತಿತ್ತು
ಹಾಡಲು ಹೊರಟೆ ಬಹುರೂಪಿಗಳಂತೆ
ಗೀಚಲು ಹೊರಟೆ ಕಬ್ಬಿಗರಂತೆ
ಗಿಡಗಂಟೆಗಳಂತೆ ನನ್ನ ಕವಿತೆ.
ಹಾಡಿಬಿಟ್ಟಿದ್ದವು ಹಕ್ಕಿಗಳು ಆಗಲೇ.
ಎದ್ದು ನಾನು ಬರೆಯುವ ಹೊತ್ತಿಗೆ........
----ಸುರೇಶ ಜಕಾತಿ.ಜಮಖಂಡಿ
8746086658
- ಸುರೇಶ ಜಕಾತಿ.ಜಮಖಂಡಿ
24 Sep 2017, 06:08 pm
Download App from Playstore: