ಶ್ಯಾಮನ ನೆನಪಲಿ.....
ಆ ಶ್ಯಾಮನ ನೆನಪಲಿ
ನನ್ನನೆ ಮರೆತಿರುವ ನಾನು ರಾಧೆ
ಅವನ ಪ್ರೀತಿಯ ಮೋಡಿಯಲಿ
ಬಂಧಿಯಾಗಿ ನಾ ಕರಗಿ ನೀರಾದೆ
ಕೊಳಲನೂದುತಿರಲವನು ಬಲು ಮೋಹಕ
ನೆನೆಯುತಿರಲವನ ನನ್ನೊಳಗೆ ಏನೊ ಪುಳಕ
ಅವನ ಪ್ರೇಮದೊಳಗೆ ಎಲ್ಲವೂ ಭಾವುಕ
ಕನಸಿನ ಲೋಕಕ್ಕೆಲ್ಲ ಅವನೆ ನಾಯಕ
ಸನಿವಿರಲು ಅವನದು ಅತಿ ತುಂಟತನ
ದೂರ ಸರಿದರವನು ತಾಳಲಾರೆ ಒಂಟಿತನ
ನನ್ನ ಬಾಳ ತುಂಬೆಲ್ಲ ಅವನದೆ ಕಥನ
ಅವನಿಲ್ಲದೆ ಸಾಗುವುದೆ ಈ ಬಾಳಯಾನ
- ಶ್ರೀಕಾವ್ಯ
24 Sep 2017, 08:43 pm
Download App from Playstore: