ಹೆಣ್ಣು ಮಗುವಿಗಾಗಿ ಒಂದು ದಿನ
#ಹ್ಯಾಪಿ #ಡಾಟರ್ಸ #ಡೇ
#ಅವಳೆಂದರೆ...
ಮುದ್ದು ಬಂಗಾರಿ
ನನ್ನೊಲವಿನ ಸಿಂಗಾರಿ
ತೊದಲ ಮಾತಲಿ
ಅಮ್ಮಾ ಎನಲು
ಹೊಮ್ಮಿತು ಮನದಲಿ
ಸಂತಸದ ಹೊನಲು
ಪುಟ್ಟ ಹೆಜ್ಜೆಯನ್ನು ಇಟ್ಟು
ತುಂಟಾಟ ಮಾಡಲು
ಬಾಲಕೃಷ್ಣನ ಸೊಬಗು
ನನ್ನಾಸೆಯ ಕವಲೊಡೆದ ದಿನ
ಶಿಕ್ಷಣಕೂ ಸೈ ನೃತ್ಯಕೂ ಸೈ
ಅನಾರೊಗ್ಯದಿ ಬಳಲಿದಾಗ
ಮತ್ತೊಮ್ಮೆ ಅಮ್ಮನ ಆರೈಕೆ
ಅವಳ ಕಣ್ಣಲ್ಲಿ ಕಂಡೆ
ಹೆಣ್ಣೆಂದರೆ ಮೂಗು ಮುರಿಯವ
ಜನರೇ ಹೆಚ್ಚು ಜಗದಲಿ
ಹೆಣ್ಣಿರದಿದ್ದರೆ ಎಲ್ಲಿಂದ
ಸಿಗುತ್ತಿತ್ತು
ಕವಿಕಾವ್ಯಕೆ ಸ್ಪೂರ್ತಿ
ಸೌಂದರ್ಯಕೆ ಪ್ರತೀತಿ
#ಹೆಣ್ಣನ್ನು #ಗೌರವಿಸಿ #ಆದರಿಸಿ
#ಮಾನಸಾ #ಎಪಿ
- ಮಾನಸಾ ಎಪಿ
24 Sep 2017, 11:50 pm
Download App from Playstore: