ವಿಶ್ವಮಾನವನಾಗು..
ವಿಶ್ವಮಾನವ
ಏನಾದರು ಸಾಧಿಸಬೇಕೆಂಬುದು ಎಲ್ಲರ ಹಂಬೋಣ
ಏನು ಸಾಧಿಸಬೇಕೆಂದು ತಿಳಿಯದೇ ಹೈರಾಣ..!!!
ಭಿತ್ತಿದ ಬೀಜವ ಮೊಳಕೆಯೊಡೆಯಲು ಬಿಡದೇ
ಕಿತ್ತು ಕಿತ್ತು ಬೇರೆಡೆ ಭಿತ್ತುತ್ತ ಹೊದೆಡೆ ಫಸಲು ಬರುವುದೇ!!
ಇಟ್ಟ ಹೆಜ್ಜೆಯ ಬದಲಿಸುತ, ಮರಳಿ ಬದಲಿಸುತ ಸಾಗಿದೊಡೆ
ಹರಿ ಮೆಚ್ಚುವನೆನು..!!!!
ಇಟ್ಟ ಗುರಿಯು ತಪ್ಪಿದರೂ ಚಿಂತೆಯಿಲ್ಲ..
ಗುರಿ ಬದಲಿಸುತ ಚಿಂತೆಯ ಚಿತೆ ಏರಿ
ವೃಥಾ ಕಾಲಹರಣಕ್ಕಿಂತ...
ಪ್ರಯತ್ನನಿಸಿದೆನೆಂಬ ಆತ್ಮ ತೃಪ್ತಿ ಸಾಕು.
ಬದುಕು ಶುರುವಾದಾಗ ಸಾವಿನ ಭಯ
ಸಾವು ಸಮೀಪಿಸಿದಾಗ ಬದುಕಿನ ಆಸೆ
ಇದ್ದಾಗ ಉಣಬೇಕು, ಉಡಬೇಕು ಕಾಯಕ ಮಾಡಬೇಕು
ಇಲ್ಲದಾಗ ಶಿವನಿಚ್ಚೆ ಎಂದು ಮೂಟೆ ಕಟ್ಟುತಿರಬೇಕು
ಆರಂಭದ ಪಯಣ ಹೆತ್ತ ತಾಯಿಯ ಒಡಲಲ್ಲಿ
ಅಂತ್ಯದ ನಿಲುಗಡೆ ಹೊತ್ತ ಭೂ ತಾಯಿಯ ಮಡಿಲಲ್ಲಿ
ಎಲ್ಲರನ್ನು ಮೆಚ್ಚಿಸಲು ಹೊರಟ ನೀ ಮೆಚ್ಚಿಸಿದ್ದೇನು
ನಾನು ನನದೆಂದು ಬಡಿದಾಡಿ ಹೋರಾಡಿದವನಿಗೆ ಸಿಕಿದ್ದೇನು
ನಿನ್ನೆ ಮರೆಯುವರು ಮುಂದೆ ನಿನ್ನ ಪೀಳಿಗೆಯವರು
ಯಾರಿಗಾಗಿ ದುಡಿದೆ ನೀ ನಿದ್ದೆಗೆಟ್ಟು, ಕಷ್ಟಪಟ್ಟು
ಅಳಿಲು ಸೇವೆಯ ಮಾಡು ನೀ ನಿನ್ನವರಿಗೆ, ನೆರೆಹೊರೆಯವರಿಗೆ, ಕುಲಭಾಂಧವರಿಗೆ, ಸಮಾಜಸೇತುವೆಗೆ
ಉಳಿಯುವೆ ನೀನು
ವಿಶ್ವಮಾನವನಾಗಿ, ಮುಂದಿನ ಪೀಳಿಗೆಗಾಗಿ
- ರಾಘವ್ ರಾಕೇಶ್ ( ನೀನು )
- ರಾಘವ್ ರಾಕೇಶ್
25 Sep 2017, 05:26 pm
Download App from Playstore: