ನಾ ದೇಶ ಕಾಯೋ ಯೋಧ ಗೆಳತಿ

ನಾ ದೇಶ ಕಾಯೋ ಯೋಧ ಗೆಳತಿ‌
ನೀ‌ನು ಯಾಕೆ ಹಿಂಗೆ ನನ್ನ ತಡೆಯುತಿ
ನೀನೇನೆ ಎಂದೂ ನನ್ನ ಉಸಿರಿಗೊಡತಿ
ನಾನಿಂದು ಹೋಗದಿದ್ದರೆ ಎಷ್ಟೋ ಮುಗ್ಧ ಜೀವ ಮಣ್ಣಾಗುತೈತಿ

ನೀನಿರಲು ಸನಿಹ ಬರದಿರಬಹುದೇನೊ ನನಗೆ ವಿರಹ
ನಾನಿಂದು ಹೋಗದೆ ಅಳಿಸಿ ಹೋದರೆ ಜೀವಗಳ ಹಣೆಬರಹ
ನಾನಿಲ್ಲಿ ಕೊರಗಿ‌ ಕರಗಿ ಮಣ್ಣ ಸೇರುವೆ ಸೋತವನ‌ ತರಹ
ಆಗ ನೀ‌‌ ನಗುತ ಬಾಳಲಾಗುವುದೆ ನನ್ನ ಜೊತೆ ಮಾಡಿ ಕಲಹ

ನಿನ್ನೊಲವ ಪ್ರೇಮದ ರಕ್ಷೆ ಇದ್ದರೆ ನನ್ನೀ ಜೀವಕೆ ಚಿನ್ನ
ಹೇಗೆ ಕರೆದೊಯ್ಯುವನೆ ಜವರಾಯ ನಿನ್ನಿಂದ ದೂರ ನನ್ನ
ನಾ ಬಂದು ಮತ್ತೊಮ್ಮೆ ನಿನ್ನ ಸೇರುವ ಮುನ್ನ
ಗೆದ್ದು ಬಾರೊ ಗೆಳೆಯ ನಿನಗಾಗೆ ಕಾದಿರುವೆನೆಂದು ಹಾರೈಸಿ ಕಳಿಸೆ ನನ್ನ

ನಾ‌ ಬಂದೆ ಬರುತೀನಿ ಬಂದು ನಿನ್ನ ಸೇರುತೀನಿ‌
ಬರದಿದ್ದರೆ ಕೊರಗದಿರು ಕಣ್ಣೀರ ಜಾರಿಸದಿರು
ವೀರ ಮರಣ ನನ್ನವ‌ನದೆಂದು ಹೆಮ್ಮಯಲಿ ಬದುಕಿರು
ಗೆದ್ದು ಬರಲಿ‌ ನನ್ನಿನಿಯ ಎಂದು ದೇವರ ಬೇಡುತಿರು ನೀ

- ಶ್ರೀಕಾವ್ಯ

25 Sep 2017, 08:33 pm
Download App from Playstore: